13 ರ ಬಾಲಕಿ ಮೇಲೆ ಪ್ರಿನ್ಸಿಪಾಲ್ ಸೇರಿ 15 ಜನರಿಂದ 7 ತಿಂಗಳ ಕಾಲ ನಿರಂತರ ಅತ್ಯಾಚಾರ

0
135

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಪಾಟ್ನಾ: ಬಿಹಾರದ ಚಹ್ರಾ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ನಿರಂತರ ಏಳು ತಿಂಗಳು ಶಾಲೆಯ ಪ್ರಿನ್ಸಿಪಾಲ್‌, ಇಬ್ಬರು ಶಿಕ್ಷಕರು ಸೇರಿ 15 ಜನ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಇದೇ ಅವಧಿಯಲ್ಲಿ ಶಾಲೆಯ 15 ವಿದ್ಯಾರ್ಥಿಗಳು ಕೂಡ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದು, ಈ ಸಂಬಂಧ ಪ್ರಿನ್ಸಿಪಾಲ್‌, ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಾಲಕಿ ದೂರಿನಲ್ಲಿ ತಿಳಿಸಿರುವಂತೆ ಆಕೆಯ ತಂದೆ ಡಿಸೆಂಬರ್‌ 2017ರಲ್ಲಿ ಜೈಲಿಗೆ ಹೋದಾಗಿಂದಲೂ ಬೆದರಿಸಿ ಸತತ ಏಳು ತಿಂಗಳು ಸಾಮೂಹಿತ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿದ್ದು, 18 ಆರೋಪಿಗಳ ಹೆಸರನ್ನು ತಿಳಿಸಿದ್ದಾಳೆ.

ಮೊದಲಿಗೆ ಬೆದರಿಕೆಯೊಡ್ಡಿ ಸಹಪಾಠಿ ವಿದ್ಯಾರ್ಥಿಯೊಬ್ಬ ಡಿಸೆಂಬರ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಅವನೊಂದಿಗೆ ಶಾಲೆಯ ಪ್ರಿನ್ಸಿಪಾಲ್‌ ಸೇರಿ ಇನ್ನು 5 ಜನ ಸೇರಿಕೊಂಡರು. ಆದಾದ ನಂತರ ಅತ್ಯಾಚಾರ ಎಸಗುವವರ ಸಂಖ್ಯೆ 15ಕ್ಕೇರಿತು. ತನ್ನ ತಂದೆ ಜೈಲಿನಿಂದ ಬಿಡುಗಡೆಯಾಗುವವರೆಗೂ 7 ತಿಂಗಳು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು,ಪ್ರಕರಣ ಸಂಬಂಧ ಪ್ರಿನ್ಸಿಪಾಲ್‌, ಓರ್ವ ಶಿಕ್ಷಕನನ್ನು ಬಂಧಿಸಿದ್ದು, ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)