ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈನಾಡಿಯಲ್ಲಿ ಉಚಿತ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ

0
184

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈನಾಡಿ ಕಾಲ್ತೋಡು ಇಲ್ಲಿನ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ಪೋಷಕರಿಂದ ಉಚಿತ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು. ಉತ್ತಮ ಗುಣಮಟ್ಟವುಳ್ಳ ಶಿಕ್ಷಣ, ನುರಿತ ಅಧ್ಯಾಪಕ ವ್ರಂದ, ವಿದ್ಯಾರ್ಥಿ ಪೋಷಕರ ಉತ್ತಮ ಸಹಕಾರ ಮತ್ತು ವಿಧ್ಯಾಭಿಮಾನಿಗಳ ಉತ್ತಮ ಬೆಂಬಲದೊಂದಿಗೆ ಈ ಕಿರು ಶಾಲೆ ನೂತನ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟಿದ್ದು ವಿದ್ಯಾರ್ಥಿ ಪುಟಾಣಿಗಳು ಹೊಸ ಕನಸನ್ನು ಹೊತ್ತು ನೂತನ ವರ್ಷದ ವಿಧ್ಯಾಭ್ಯಾಸ ಪ್ರಾರಂಭಿಸಿದ್ದು ಪೋಷಕರ ಈ ಉಚಿತ ಐಡಿ ಕಾರ್ಡ್ ವಿತರಣೆ ಮಕ್ಕಳಲ್ಲಿ ಹೊಸ ಹರುಷಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷೆ ನೇತ್ರ ಗೌಡ, ಶಾಲಾ ಮುಖ್ಯೋಪಾಧ್ಯಾಯ ದಿನೇಶ್ , ಸಹ ಶಿಕ್ಷಕ ಸಂತೋಷ ಹಾಗೂ ಮಕ್ಕಳ ಪೋಷಕರು ಹಾಜರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)