ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ಹಠಾತ್ ಸ್ಥಗಿತ, ಡೋಲಾಯಮಾನವಾಗಿದೆ ಗ್ರಾಮೀಣ ಭಾಗದ ವಿದ್ಯಾರ್ಥಿ ಭವಿಷ್ಯ

0
282

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗ್ರಾಮೀಣ ಸಾರಿಗೆ ಸ್ಥಗಿತ.

ಬೈಂದೂರು : ಕಳೆದ ಒಂದೂವರೆ ವರ್ಷದಿಂದ ಬೈಂದೂರಿನ ವಿವಿಧ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ಹಠಾತ್ ನಿಲುಗಡೆಯಾಗಿರುವುದು ಸಾವಿರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಡೋಲಾಯಮಾನ ಮಾಡಿದೆ.

ಎಲ್ಲೆಲ್ಲಿ ಸಮಸ್ಯೆ: ಬೈಂದೂರು ತಾಲೂಕು ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ.ಇಲ್ಲಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ಬೈಂದೂರು,ಭಟ್ಕಳ ಹಾಗೂ ಕುಂದಾಪುರಕ್ಕೆ ತೆರಳಬೇಕು.ಬೈಂದೂರು ಜಂಕ್ಷನ್‍ನಿಂದ ಗಂಗನಾಡು 10 ಕಿ.ಮೀ ಅಂತರ ಮದ್ದೋಡಿ 8 ಕಿ.ಮೀ, ಗೋಳಿಬೇರು 12 ಕಿ.ಮೀ, ತೂದಳ್ಳಿ ಶಿರೂರಿನಿಂದ 9 ಕಿ.ಮೀ ಅಂತರದಲ್ಲಿದೆ.ಈ ಹಿಂದೆ ಬಸ್ಸುಗಳು ಮುಖ್ಯ ರಸ್ತೆಯ ಪ್ರಮುಖ ನಿಲ್ದಾಣಕ್ಕೆ ಬಂದರು ಸಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮನೆ ತಲುಪಬೇಕಾದರೆ ಸರಾಸರಿ ಒಂದೆರೆಡು ಕಿ.ಮೀ ಕಾಡು ದಾರಿಯಲ್ಲಿ ನಡೆಯಬೇಕು.ಗ್ರಾಮೀಣ ಸಾರಿಗೆ ಪ್ರಾರಂಭವಾದಂದಿನಿಂದ ಶಾಲಾ ಸಮಯಕ್ಕೆ ಸರಿಯಾಗಿ ಗಂಗನಾಡು ಬೆಳಿಗ್ಗೆ ಹಾಗೂ ಸಂಜೆ,ಮದ್ದೋಡಿ,ತೂದಳ್ಳಿ ಮತ್ತು ದೊಂಬೆ -ಕರಾವಳಿ ಭಾಗಕ್ಕೆ ಬಸ್ಸು ಸಂಚಾರವಿದ್ದಿತ್ತು.ಈಗ ಹಠಾತ್ ಸ್ಥಗಿತಗೊಂಡಿರುವ ಕಾರಣ ಕೆಲವು ಕಡೆ ಬದಲಿ ವ್ಯವಸ್ಥೆಯಿದ್ದರೆ ಇನ್ನು ಕೆಲವು ಕಡೆ ಪರ್ಯಾಯ ಮಾರ್ಗವಿಲ್ಲದೆ ಪಾಲಕರು ಪರಿತಪಿಸುವಂತಾಗಿದೆ.

ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ 641 ವಿದ್ಯಾರ್ಥಿಗಳು ಸರಕಾರಿ ಬಸ್ಸಿನ ಅವಲಂಬಿತರು, ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ 2000 ವಿದ್ಯಾರ್ಥಿಗಳಿದ್ದು ಅವುಗಳಲ್ಲಿ ಸರಾಸರಿ 1500 ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನರ್ಮ್ ಬಸ್ ಸೇವೆಯನ್ನು ಅವಲಂಬಿಸಿದ್ದಾರೆ. ಶಿರೂರು ಪ.ಪೂ ಕಾಲೇಜಿನಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.ಪ್ರಸ್ತುತ ತೂದಳ್ಳಿ ಭಾಗದ ವಿದ್ಯಾರ್ಥಿಗಳು ರಿಕ್ಷಾ ಆವಲಂಬಿಸಬೇಕು .ಪ್ರತಿದಿನ  ವಿದ್ಯಾರ್ಥಿಗಳಿಗೆ ಇಪ್ಪತ್ತರಿಂದ ಮೊವತ್ತು ರುಪಾಯಿ ಪಾವತಿಸಬೇಕು.ಕೆಲವು ಕಡೆ ಖಾಸಗಿ ಬಸ್ ಸಂಚಾರ ಪ್ರಾರಂಭವಾಗಿದೆ.ಇನ್ನುಳಿದ ಬಹುತೇಖ ಕಡೆಗಳ್ಲಿ ಪಾಲಕರೆ ಶಾಲೆಗೆ ಕರೆತರಬೆಕಾದ ಪರಿಸ್ಥಿತಿ ಇದೆ.

ಬಸ್ ನಿಲುಗಡೆಗೆ ಕಾರಣಗಳೇನು?: ಕಳೆದ ಅವಧಿಯಲ್ಲಿ ಬೈಂದೂರು ಶಾಸಕರು ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರಾಗಿರುವ ಕಾರಣ ಬೈಂದೂರಿನ ಗ್ರಾಮೀಣ ಭಾಗಗಳಿಗೆ 4 ಗ್ರಾಮಾಂತರ ಸಾರಿಗೆ ನರ್ಮ್ ಬಸ್‍ಗಳನ್ನು ಒದಗಿಸಿದ್ದರು.ತರಾತುರಿಯಲ್ಲಿ ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿಗಳು ಅಧಿಕೃತ ಅನುಮತಿಗಾಗಿ ಜಿಲ್ಲಾ ಸಾರಿಗೆ ಇಲಾಖೆಗೆ  ಮನವಿ ನೀಡಿದ್ದರು.ಆದರೆ ಆರ್.ಟಿ.ಓ ಅಧಿಕೃತ ಅನುಮತಿ ನೀಡಿರಲಿಲ್ಲ.ಆದರೂ ಸಹ ನರ್ಮ್ ಬಸ್‍ಗಳ ಸಂಚಾರ ಮುಂದುವರಿದಿತ್ತು.ಇದರ ಕುರಿತು ಖಾಸಗಿ ಬಸ್ ಮಾಲಕರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆಯ ಸಮಸ್ಯೆ ಲೋಕಾಯುಕ್ತ ವ್ಯಾಪ್ತಿಗೆ ಒಳಪಡದಿದ್ದರು ಸಹ ಈ ಪ್ರಕರಣವನ್ನು ಎತ್ತಿ ಹಿಡಿದ ಲೋಕಾಯುಕ್ತ ಕಛೇರಿ ಜೂ.19ರೊಳಗೆ  ಅಫಿಡಾವಿತ್ ನೀಡಲು ಅಧಿಕಾರಿಗಳು ಸೂಚಿಸಿದ್ದಾರೆ.ಹೀಗಾಗಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ನರ್ಮ್ ಬಸ್‍ಗಳನ್ನು ಹಠಾತ್ ನಿಲುಗಡೆಗೊಳಿಸಿದ್ದಾರೆ.ಆದರೆ ಆರ್.ಟಿ.ಓ.ಅಧಿಕಾರಿಗಳು ಸಾರ್ವಜನಿಕ ಹಿತದ್ರಷ್ಟಿಯಿಂದ ಅನುಮತಿ ನೀಡಿದರೆ ಈ ಸಮಸ್ಯೆ ಇತ್ಯರ್ಥವಾಗುತ್ತದೆ ಎನ್ನುವುದು ಅ„ಕಾರಿಗಳ ಅಭಿಪ್ರಾಯವಾಗಿದೆ.

ಒಂದು ಕಣ್ಣಿಗೆ ಸುಣ್ಣ,ಇನ್ನೊಂದು ಕಣ್ಣಿಗೆ ಬೆಣ್ಣೆ: ಗ್ರಾಮೀಣ ಭಾಗದ ಜನಪರ ಯೋಜನೆಗೆ ಸಾರಿಗೆ ಇಲಾಖೆ ಒಂದು  ಕಣ್ಣಿಗೆ ಸುಣ್ಣ,ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ಮಾಡುತ್ತಿದೆ.ರಾಜ್ಯ ಜಂಟಿ ಸಾರಿಗೆ ಆಯುಕ್ತರ ಮಾಹಿತಿ ಪ್ರಕಾರ

ಪಿಎಸ್‍ಟಿಪಿಸಿ/2 ಡಿಕೆ 83.84, ಪಿಎಸ್‍ಟಿಪಿಸಿ 7/ಡಿಕೆ 93.94 , ಪಿಎಸ್‍ಟಿಪಿಸಿ 199/98.99 ,ಪಿಎಸ್‍ಟಿಪಿಸಿ 01/ಯುಡಿಪಿ 99 ಸೇರಿದಂತೆ ನಾಲ್ಕು ಅಧಿಕ್ರತ ಪರವಾನಗೆ ಖಾಸಗಿಯವರಿಗೆ ಕುಂದಾಪುರದಿಂದ ಭಟ್ಕಳಕ್ಕೆ  ನೀಡಲಾಗಿದೆ.ಪ್ರಸ್ತುತ ಹತ್ತಕ್ಕೂ ಅ„ಕ ಬಸ್‍ಗಳು ಸಂಚರಿಸುತ್ತಿದೆ.ಆನಧಿಕ್ರತವಾಗಿ ಸಂಚರಿಸುವ ಖಾಸಗಿ ಬಸ್‍ಗಳ ಮೇಲೆ ಕ್ರಮ ಕೈಗೊಳ್ಳದೆ ಸರಕಾರಿ ಬಸ್‍ಗಳ ಮೇಲೆ ಪ್ರಹಾರ ಮಾಡಿರುವುದು ವ್ಯಾಪಕ ವಿರೋದಕ್ಕೆ ಕಾರಣವಾಗಿದೆ.

ಬೈಂದೂರಿನ ಬಸ್ಸು ವ್ಯವಸ್ಥೆ ಮಾಹಿತಿ:ಸರಕಾರಿ ಬಸ್ಸುಗಳ ಸಂಖ್ಯೆ:14, ಗ್ರಾಮಾಂತರ ಸಾರಿಗೆ ಬಸ್‍ಗಳು:6, ಖಾಸಗಿ ಬಸ್‍ಗಳ ಸಂಖ್ಯೆ:41.

ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳದ್ದೆ ಸಮಸ್ಯೆ:ಸಾರಿಗೆ ಅಧಿಕಾರಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 66 ಸರಕಾರಿ ಬಸ್‍ಗಳಿಗೆ ಪರವಾನಗೆ ನೀಡಲಾಗಿದೆ.ಅದರಲ್ಲಿ ಕೇವಲ 30 ಬಸ್‍ಗಳು ಮಾತ್ರ ಸಂಚಾರ ನಡೆಸುತ್ತಿದೆ.ನಾವು ಪರವಾನಗೆ ನೀಡುವಾಗ ಬಸ್ ಸಂಖ್ಯೆಯನ್ನು ನಮೂದಿಸಿ ನೀಡುತ್ತೆವೆ.ಕೆ.ಎಸ್.ಆರ್.ಟಿ.ಸಿ ಅ„ಕಾರಿಗಳು ಹೊಸ ಬಸ್‍ಗಳಿಗೆ ನಮ್ಮಿಂದ ಪರವಾನಗೆ ಕೇಳಿಲ್ಲ.ಹಳೆಯ ಪರವಾನಗೆಯೊಂದಿಗೆ ಓಡಿಸುತಿದ್ದಾರೆ.ಮತ್ತು ಸಾರ್ವಜನಿಕರಿಗೆ ಗೊಂದಲ ಉಂಟುಮಾಡುತ್ತಿದ್ದಾರೆ.ಈಗಲೂ ಕೂಡ ಅನುಮತಿ ಕೇಳಿದರೆ ನಾವು ಪರವಾನಗೆ ನೀಡುತ್ತೆವೆ.ಕುಂದಾಪುರ ಭಟ್ಕಳ ಅನಧಿಕ್ರತ ಖಾಸಗಿ ಬಸ್‍ಗಳು ಓಡಾಡುವ ದೂರು ಬಂದರೆ ಕ್ರಮಕೈಗೊಳ್ಳುತ್ತೇವೆ-ವರ್ಣೇಕರ್ ಸಾರಿಗೆ ಅಧಿಕಾರಿ ಉಡುಪಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)