ಮಳೆಯ ಅಬ್ಬರಕ್ಕೆ ಒತ್ತಿನೆಣೆ ಗುಡ್ಡದ ತಳಭಾಗ ಕುಸಿತ, ಆತಂಕದಲ್ಲಿ ಹೆದ್ದಾರಿ ಪ್ರಯಾಣಿಕರು

0
42

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು,ಜೂ.09:ಮಳೆಯ ಅಬ್ಬರಕ್ಕೆ ಒತ್ತಿನೆಣೆ ಗುಡ್ಡದ ತಳಭಾಗ ಬಿರುಕು ಬಿಟ್ಟಿದೆ.ಗುಡ್ಡ ಕುಸಿಯದಂತೆ ಅಳವಡಿಸಿದ ಹೈಟೆಕ್ ತಂತ್ರಜ್ಞಾನದ ಸ್ಲೋಪ್ ಪ್ರೋಟೆಕ್ಷನ್ ವಾಲ್ ಪ್ಲಾಪ್ ಆಗಿದೆ.ಕಾಂಕ್ರೀಟ್ ಅಳವಡಿಸಿದ ಭಾಗದಲ್ಲಿ ನೀರು ಜಿನುಗಲು ಪ್ರಾರಂಭವಾಗಿರುವುದು ಕಳೆದ ವರ್ಷದ ಘಟನೆ ಮರುಕಳಿಸುವುದೇ ಎನ್ನುವ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಅವೈಜ್ಞಾನಿಕ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ: ಬೈಂದೂರಿನ ಪಾಲಿಗೆ ಅಧಿಕಾರಿಗಳ ನಿರ್ಲಕ್ಷವೇ ಇಂತಹ ಅವೈಜ್ಞಾನಿಕ ಕಾಮಗಾರಿಗೆ ಕಾರಣವಾಗಿದೆ.ಇಲ್ಲಿನ ಬೌಗೋಳಿಕ ಅಂಶಗಳ ಜ್ಞಾನವಿಲ್ಲದ ತಂತ್ರಜ್ಞರ ಯೋಜನೆಯಿಂದ ಪ್ರತಿ ವರ್ಷ ಸಮಸ್ಯೆ ಮರುಕಳಿಸುವಂತೆ ಮಾಡಿದೆ.ಗುರುವಾರ ರಾತ್ರಿ ಸುರಿದ ಮಳೆಗೆ ಗುಡ್ಡದ ಅಂಚಿನಲ್ಲಿ ಮಣ್ಣು ಜಾರದಂತೆ ನಿರ್ಮಿಸಿದ ಕಾಂಕ್ರೀಟ್ ದಂಡೆ ಕೊಚ್ಚಿ ಹೋಗಿದೆ.ಮಾತ್ರವಲ್ಲದೆ ಸಂಪೂರ್ಣ ಸ್ಲೋಪ್ ಪ್ರೋಟೆಕ್ಷನ್ ವಾಲ್ ಬಿರುಕು ಬಿಡುವ ಸಾಧ್ಯತೆಗಳಿವೆ. ಗುಡ್ಡದ ಶೇಡಿ ಮಣ್ಣು ಚರಂಡಿಗೆ ಇಳಿಯುತ್ತಿದೆ.ಕಾಂಕ್ರೀಟ್ ಹೊದಿಕೆ ಕುಸಿಯುವ ಸಾಧ್ಯತೆಗಳಿವೆ. ಒಂದೆರಡು ದಿನ ನಿರಂತರ ಮಳೆ ಸುರಿದರೆ ಸಂಪೂರ್ಣ ರಸ್ತೆ ತಡೆ ಉಂಟಾಗುವ ಸಾಧ್ಯತೆಗಳಿವೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಮೊದಲ ಬಾರಿ ಅಳವಡಿಸಿದ ಸ್ಲೋಪ್ ಪ್ರೋಟೆಕ್ಷನ್ ವಾಲ್: ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡವನ್ನು ಕೊರೆದು ಇಬ್ಬಾಗ ಮಾಡಲಾಗಿದೆ.ಮೇಲ್ಬಾಗದಲ್ಲಿ ಮ್ಯಾಂಗನೀಸ್ ಕಲ್ಲಿನ ಪೆÇಟೆರೆಗಳಿದ್ದರು ಸಹ ಅಡಿಭಾಗದಲ್ಲಿ ಸಂಪೂರ್ಣ ಶೇಡಿಮಣ್ಣಿನಿಂದ ಆವೃತವಾಗಿದೆ.ಮಾತ್ರವಲ್ಲದೆ ಗುಡ್ಡದ ಅಂಚಿನಲ್ಲಿ ಜಿನುಗುವ ನೀರಿನ ಸೆಲೆಯಿಂದಾಗಿ ಮಣ್ಣಿನ ಅಂಟಿನ ಸಾಂದ್ರತೆ ಕಡಿಮೆಯಾಗಿ ಕಳೆದ ಬಾರಿ ಸಂಪೂರ್ಣ ಗುಡ್ಡವೆ ಕುಸಿದು ಬಿದ್ದಿತ್ತು.ಹೀಗಾಗಿ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಗುಡ್ಡವನ್ನು ಕೊರೆದು ಕಬ್ಬಿಣದ ರಾಡ್ ಹಾಗೂ ಮೆಶ್ ಅಳವಡಿಸಿ ಅದರ ಮೇಲೆ ಸಂಪೂರ್ಣ ಕಾಂಕ್ರೀಟ್ ಮಾಡಲಾಗಿದೆ.ಇದರಿಂದ ಮಳೆಗಾಲದಲ್ಲಿ ನೀರು ಇಂಗದೆ ಸರಾಗವಾಗಿ ಹರಿದು ಹೋಗುತ್ತದೆ.ಮಾತ್ರವಲ್ಲದೆ ಗುಡ್ಡದ ಕೆಳಭಾಗದಲ್ಲಿ ಕಾಂಕ್ರಿಟ್ ಚರಂಡಿ ನಿರ್ಮಿಸಲಾಗಿದೆ.ಇದು ಬೈಂದೂರಿನಲ್ಲಿ ಮೊದಲ ಬಾರಿ ಅಳವಡಿಸಲಾಗಿದೆ.ಕಾಂಕ್ರಿಟ್ ಅಳವಡಿಸಿದ ಪಕ್ಕದಲ್ಲಿ ಲವಂಚ ಮಾದರಿಯ ಹುಲ್ಲುಗಳನ್ನು ನೆಡಲಾಗಿದೆ.ಇದರ ಬೇರುಗಳು ಆಳಕ್ಕೆ ಇಳಿಯುವುದರಿಂದ ಮಣ್ಣು ಕದಲದಂತೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಕಂಪೆನಿಯ ಲೆಕ್ಕಾಚಾರವಾಗಿದೆ.

ಈ ಕುರಿತು ಪ್ರತಿಕ್ರಯಿಸಿದ ಐ.ಆರ್.ಬಿ ಪ್ರೋಟೆಕ್ಷನ್ ಮೆನೇಜರ್ ಯೋಗೇಂದ್ರಪ್ಪ ಗುಡ್ಡ ಕುಸಿಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಅಳವಡಿಸಿದ್ದೇವೆ. ಗುಡ್ಡದ ಪಕ್ಕದಲ್ಲಿ ಬೆಳೆಸಿದ ಆಸ್ಟ್ರೇಲಿಯನ್ ಮೂಲದ ಗಿಡಗಳು ಬೆಳೆಯಲು ಕನಿಷ್ಟ ಆರರಿಂದ  ಹತ್ತು ತಿಂಗಳು ಬೇಕಾಗುತ್ತದೆ.ಒಂದು ತಿಂಗಳ ಹಿಂದೆ ನೆಟ್ಟಿರುವುದರ ಪರಿಣಾಮ ಬೇರು ಮಣ್ಣನ್ನು ಸೇರಿಕೊಳ್ಳದೆ ಕುಸಿಯುತ್ತಿದೆ.ಕಾಂಕ್ರಿಟ್ ಅಳವಡಿಕೆಯ ಸ್ಲೋಪ್ ಪ್ರೋಟೆಕ್ಷನ್ ವಾಲ್ ಕುಸಿಯುವ ಬಗ್ಗೆ ಆತಂಕ ಬೇಡ ಯಾವುದೇ ರೀತಿಯಲ್ಲೂ ಸಹ ಕಳೆದ ವರ್ಷದಂತೆ ಘಟನೆ ಮರುಕಳಿಸುವುದಿಲ್ಲ .ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು.

ರಾಘವೇಂದ್ರ ಮಠದ ರಸ್ತೆಯೂ ಕೊರೆದು ಹೋಗಿದೆ : ಇಲ್ಲಿನ ಒತ್ತಿನೆಣೆ ಗುಡ್ಡ ಕುಸಿತಕ್ಕೆ ಸಮೀಪದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮುನಿಸು ಕಾರಣವೆಂದು ಸ್ಥಳೀಯರ ಅಭಿಪ್ರಾಯವಾಗಿದೆ.ಈ ಬಾರಿ ಐ.ಆರ್.ಬಿ ಕಂಪೆನಿ ಅಧಿಕಾರಿಗಳು ರಾಘವೇಂದ್ರ ಮಠಕ್ಕೆ ಪ್ರತ್ಯೇಕ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಆ ರಸ್ತೆಯೂ ಮಳೆಯಿಂದ ಕೊರೆದು ಹೋಗಿದೆ.

ಸ್ಥಳಕ್ಕೆ ಎ.ಸಿ ಬೇಟಿ; ಒತ್ತಿನೆಣೆ ಗುಡ್ಡ ಕುಸಿತ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ಬೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ಮಾತ್ರವಲ್ಲದೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.ನೀರು ಹರಿದು ಹೋಗಲು ಮೋರಿ ಅಳವಡಿಸುವ ಜೊತೆಗೆ ತಕ್ಷಣ ಸಂ„ಸುವ ಸಿದ್ದತೆಯಲ್ಲಿರಬೇಕು ಹಾಗೂ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸುವಂತೆ ಕಂಪೆನಿ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಪುರಂದರ ಹೆಗ್ಡೆ, ಬೈಂದೂರು ದೂರು ಆರಕ್ಷಕ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್, ಗ್ರಾಮಕರಣಿಕ ಮಂಜುನಾಥ ಬಿಲ್ಲವ ಹಾಜರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia