ಈ ಬಾರಿ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್​ ಕೂಟ ಇಲ್ಲ

0
227

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ರಾಷ್ಟ್ರಪತಿ ರಾಮ್​ನಾಥ ಕೋವಿಂದ್​ ಈ ಬಾರಿ ರಾಷ್ಟ್ರಪತಿಭವನದಲ್ಲಿ ಇಫ್ತಾರ್​ ಕೂಟ ಆಯೋಜಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ.

ರಾಷ್ಟ್ರಪತಿ ಭವನದಲ್ಲಿ ಸಾರ್ವಜನಿಕರು ಪಾವತಿಸುವ ತೆರಿಗೆ ಹಣವನ್ನು ಯಾವುದೇ ಧಾರ್ಮಿಕ ಆಚರಣೆಗೆ ಬಳಸುವುದು ಬೇಡ ಎಂದು ಕೋವಿಂದ್​ ನಿರ್ಧರಿಸಿದ್ದಾರೆ.

ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ಅಶೋಕ್​ ಮಲಿಕ್​ ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿದ್ದು, ರಾಷ್ಟ್ರಪತಿ ಕೋವಿಂದ್​ ಅವರು ಕಳೆದ ವರ್ಷ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ದೀಪಾವಳಿ, ಕ್ರಿಸ್​ಮಸ್​, ಹೋಳಿ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಿಲ್ಲ. ಅದೇ ರೀತಿ ಇಫ್ತಾರ್​ನ್ನು ಕೂಡ ಆಚರಿಸದಂತೆ ನಿರ್ಧರಿಸಲಾಗಿದೆ ಎಂದಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಇಫ್ತಾರ್​ ಕೂಟ ಆಯೋಜಿಸುವುದನ್ನು ಪ್ರತಿಭಾ ಪಾಟೀಲ್​ ರಾಷ್ಟ್ರಪತಿಯಾಗಿದ್ದಾಗ ಆರಂಭಿಸಲಾಗಿತ್ತು. ಅವರ ನಂತರ ಪ್ರಣಬ್​ ಮುಖರ್ಜಿ ಕೂಡ ಈ ಆಚಣೆಯನ್ನು ಮುಂದುವರಿಸಿಕೊಂಡು ಬಂದಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)