ಯುವತಿಗಾಗಿ ಸ್ನೇಹಿತನ ಎದೆಗೆ ಚೂರಿ ಇರಿದ ಕಾರ್ಪೋರೇಟರ್ ಮಗ!

0
839

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

ದಾವಣಗೆರೆ : ಕಾರ್ಪೋರೇಟರ್ ಮಗ ಯುವತಿಗೊಬ್ಬಳಿಗಾಗಿ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ.

ಹರೀಶ್ ಹಾಗೂ ರಾಕೇಶ್ ಸ್ನೇಹಿತರಾಗಿದ್ದು, ಹುಡುಗಿಯೊಬ್ಬಳ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಅತೀರೇಕಕ್ಕೆ ಹೋಗಿದ್ದು, ಕಾರ್ಪೋರೇಟರ್ ಪುತ್ರ ರಾಕೇಶ್ ಸ್ನೇಹಿತ ಹರೀಶ್ ಗೆ ನಡುಬೀದಿಯಲ್ಲೇ ಚಾಕು ಹಾಕಿದ್ದಾನೆ. ಹರೀಶ್ ಎದೆ ಮತ್ತು ತಲೆಭಾಗಕ್ಕೆ ಪೆಟ್ಟು ಬಿದ್ದಿದ್ದು, ಗಾಯಾಳು ಹರೀಶ್ ನನ್ನು ಸಮೀಪದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಸಂಬಂಧ ರಾಕೇಶ್ ವಿರುದ್ಧ ಕೆಟಿಜೆ ನಗರದ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ. ಕಾರ್ಪೋರೇಟರ್ ಪುತ್ರನ ಅಟ್ಟಹಾಸಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

Dailyhunt
ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)