14 ವರ್ಷದ ವಿದ್ಯಾರ್ಥಿ ಮೇಲೆ ಬಿತ್ತು 34ರ ಶಿಕ್ಷಕಿ ಕಣ್ಣು… ಅವನೇ ಬೇಕೆಂದವಳಿಗೆ ಈಗ ನ್ಯಾಯಾಂಗ ಬಂಧನ!

0
312

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ನವದೆಹಲಿ: ಹದಿನಾಲ್ಕು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 34 ವರ್ಷದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ಸಂತ್ರಸ್ತ ಬಾಲಕ ಶಿಕ್ಷಕಿ ಬಳಿ ಟ್ಯೂಷನ್​ಗೆ ಹೋಗುತ್ತಿದ್ದ.

ಕಳೆದ ಸೋಮವಾರ ಈ ಕೃತ್ಯ ನಡೆದಿದ್ದು, ಸಂತ್ರಸ್ತ ಬಾಲಕನ ಪಾಲಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ದೂರು ದಾಖಲಿಸುವಂತೆ ಮಕ್ಕಳ ಸಹಾಯವಾಣಿ ಪಾಲಕರಿಗೆ ಬುಧವಾರ ತಿಳಿಸಿದಾಗ ಸೆಕ್ಷನ್​ 6ರ ಅನ್ವಯ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಚಂಡೀಗಢ ಹಿರಿಯ ವರಿಷ್ಠಾಧಿಕಾರಿ ನೀಲಂಬರಿ ವಿಜಯ್​ ಜಗದಾಳೆ ತಿಳಿಸಿದ್ದಾರೆ.

ಸಂತ್ರಸ್ತ ಹಾಗೂ ಆರೋಪಿ ಇಬ್ಬರು ಸರ್ಕಾರಿ ಶಾಲೆಯವರಾಗಿದ್ದು, ಆರೋಪಿ ವಿಜ್ಞಾನ ಶಿಕ್ಷಕಿಯಾಗಿದ್ದಾಳೆ. ಇಬ್ಬರೂ ಕೂಡ ಚಂಡೀಗಢದ 31ನೇ ವಲಯ ರಾಮ್​ ದರ್ಬಾರ್​ ಕಾಲೋನಿಯ ನಿವಾಸಿಗಳಾಗಿದ್ದಾರೆ. ಎರಡೂ ಕುಟುಂಬಗಳೂ ಪರಸ್ಪರ ತಿಳಿದವರಾಗಿದ್ದರೂ, ಸಂತ್ರಸ್ತ ಬಾಲಕ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ತನ್ನ ಸಹೋದರಿಯೊಂದಿಗೆ 2017ರ ಸೆಪ್ಟೆಂಬರ್​ನಿಂದಲೂ ಶಿಕ್ಷಕಿ ಬಳಿ ಟ್ಯೂಷನ್ ಪಡೆಯುತ್ತಿದ್ದರು.​ ​

ಬಾಲಕನ ಮೇಲೆ ಗಮನ ವಹಿಸಲು ಆತನ ಸಹೋದರಿಯನ್ನು ಬೇರೆ ಸಮಯದಲ್ಲಿ ಟ್ಯೂಷನ್​ಗೆ ಕಳುಹಿಸುವಂತೆ ಶಿಕ್ಷಕಿ ಪಾಲಕರ ಬಳಿ ಕೇಳಿಕೊಳ್ಳುತ್ತಿದ್ದಳಂತೆ. ಇದಕ್ಕೆ ಒಪ್ಪಿದ ನಂತರ ಶಿಕ್ಷಕಿ ಬಾಲಕನನ್ನು 2018ರ ಪ್ರಾರಂಭದಿಂದಲೂ ದೈಹಿಕವಾಗಿ ಬಳಸಿಕೊಂಡಿದ್ದಾಳೆ. ಅಲ್ಲದೆ, ಆತನಿಗೆ ಸಿಮ್​ ಕಾರ್ಡೊಂದನ್ನು ತೆಗೆದುಕೊಟ್ಟು ನಿರಂತರ ಸಂಪರ್ಕದಲ್ಲಿರುವಂತೆ ತಿಳಿಸಿದ್ದಾಳೆಂದು ಮಕ್ಕಳ ಸಹಾಯವಾಣಿ ನಿರ್ದೇಶಕಿ ಡಾ. ಸಂಗೀತ ಜಂಡ್​ ಹೇಳಿದ್ದಾರೆ.

ಯಾವಾಗ ಬಾಲಕ ಕಲಿಕೆಯಲ್ಲಿ ಹಿಂದುಳಿದಿದ್ದನ್ನು ಕಂಡ ತಾಯಿ ಆತನನ್ನು ಟ್ಯೂಷನ್​ಗೆ ಹೋಗದಂತೆ ತಡೆದಾಗ, ಕೆಲವು ದಿನಗಳ ನಂತರ ಮತ್ತೆ ಟ್ಯೂಷನ್​ಗೆ ಕಳುಹಿಸುವಂತೆ ಶಿಕ್ಷಕಿ ಪಾಲಕರನ್ನು ಒತ್ತಾಯಿಸುತ್ತಾಳೆ. ಆದರೆ, ಅದನ್ನು ತಿರಸ್ಕರಿಸಿದಾಗ ಒಮ್ಮೆ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಬರುವಂತೆ ಪಾಲಕರ ಬಳಿ ಕೇಳಿಕೊಳ್ಳುತ್ತಾಳೆ.

ಸೋಮವಾರ ಕರೆದುಕೊಂಡು ಬಂದಾಗ ಶಿಕ್ಷಕಿ ಪಾಲಕರ ಮುಂದೆಯೇ ಹೈಡ್ರಾಮ ಮಾಡಿದ್ದಾಳೆ. ಬಾಲಕನನ್ನು ಪಾಲಕರು ಹಾಗೂ ಆಕೆಯ ಗಂಡನ ಮುಂದೆಯೇ ರೂಮಿನೊಳಗೆ ಕರೆದೋಗಿ ಬಾಗಿಲು ಬಂದ್​ ಮಾಡಿಕೊಂಡಿದ್ದಾಳೆ. ಈ ವೇಳೆ ತನ್ನ ಗಂಡನನ್ನು ಈ ವಿಚಾರದಿಂದ ಹೊರಗೆ ಉಳಿಯುವಂತೆ ತಾಕೀತು ಮಾಡಿದ್ದಾಳೆ. ನಂತರ ನೆರೆಯವರು ಮಧ್ಯ ಬಂದು ಬಾಲಕನನ್ನು ರಕ್ಷಿಸಿದ್ದಾರೆ ಎಂದು ಸಂಗೀತ ಜಂಡ್​ ತಿಳಿಸಿದ್ದಾರೆ.

ಇಷ್ಟಕ್ಕೆ ಮುಗಿಯದ ಡ್ರಾಮ, ನಂತರ ಬಾಲಕ ತನ್ನ ಪಾಲಕರೊಂದಿಗೆ ಮನೆಗೆ ವಾಪಸಾಗದಾಗ, ಶಿಕ್ಷಕಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮನೆಯೊಳಗೆ ನುಗ್ಗಿ ಅಲ್ಲಿದ್ದ ಕಾಪ್​ ಸಿರಪ್​ ಬಾಟಲಿಯನ್ನು ಹೊಡೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಲಾಟೆ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ಪಾಲಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಷ್ಟೆಲ್ಲಾ ಹೈ ಡ್ರಾಮದ ನಡುವೆ ಸಂತ್ರಸ್ತ ಬಾಲಕನ ಪಾಲಕರು ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)