ನದಿಯಲ್ಲಿ ಮಗುಚಿ ಬಿದ್ದ ದೋಣಿ : 23 ಜನರು ಜಲ ಸಮಾಧಿ?

0
164

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಜಯವಾಡ: ಆಂಧ್ರಪ್ರದೇಶದ ದೇವಿಪಟ್ಟಣದ ಬಳಿ ಗೋದಾವರಿ ನದಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ 23ಜನರು ನಾಪತ್ತೆಯಾಗಿದ್ದು, ಅವರು ಬದುಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ದೋಣಿಯಲ್ಲಿ ಸುಮಾರು 40 ಜನರು ಪ್ರಯಾಣಿಸುತ್ತಿದ್ದರು. ಆದರೆ ಕೆಟ್ಟ ಹವಾಮಾನದಿಂದಾಗಿ ದೋಣಿ ಮುಗುಚಿದೆ. ಅವರಲ್ಲಿ 17 ಜನರನ್ನು ರಕ್ಷಿಸಲಾಗಿದ್ದು ಉಳಿದವರು ನಾಪತ್ತೆಯಾಗಿದ್ದಾರೆ.

ವಿಜಯವಾಡ, ವಿಶಾಖಪಟ್ಟಣದ ಎನ್​ಡಿಆರ್​ಎಫ್​, ಕಾಕಿನಾಡ, ವಿಶಾಖಪಟ್ಟಣದ ಎಸ್​ಡಿಆರ್​ಎಫ್​ ತಂಡಗಳು ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ನಾಪತ್ತೆಯಾದವರನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಗೋದಾವರಿ ನದಿಯಲ್ಲಿ ದೋಣಿ ಮುಗುಚಿ ಕೆಲವರು ಸಾವನ್ನಪ್ಪಿದ್ದು ಈಗ ಮತ್ತೆ ಅದೇ ದುರಂತ ಮರುಕಳಿಸಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)