ಬೈಂದೂರಿನಲ್ಲಿ ಬೆಟ್ಟಿಂಗ್ ಜೋರು : ಗೆಲ್ಲೋರಾರು ?

0
271

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (3) ಅಸಮ್ಮತ (3) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

ಬೈಂದೂರು ವಿಧಾನಸಭಾ ಕ್ಷೇತ್ರ ಇಲ್ಲಿ ಕಾಂಗ್ರೆಸ್ ನ ಗೋಪಾಲ್ ಪೂಜಾರಿ ಶಾಸಕರಾಗಿದ್ದಾರೆ. 2008 ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಗೆದ್ದದ್ದು ಬಿಟ್ಟರೆ , ಐದು ಅವಧಿಗೆ ಇಲ್ಲಿ ಶಾಸಕರಾಗಿದ್ದವರು ಗೋಪಾಲ್ ಪೂಜಾರಿ. ಹೀಗಾಗಿ ಗೋಪಾಲ್ ಪೂಜಾರಿಯವರಿಗೆ ಈ ಕ್ಷೇತ್ರದ ಜನರ ನಾಡಿಮಿಡಿತ ಗೊತ್ತಿದೆ.

ಆದ್ರೆ ಇತ್ತೀಚೆಗೆ ಅವರು ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ. ಸದಾ ಬೆಂಗಳೂರಿನಲ್ಲಿರ್ತಾರೆ ಎಂಬ ಆರೋಪವೂ ಇದೆ. ಕಳೆದ ಬಾರಿ ಬಿಜೆಪಿಯ ಸುಕುಮಾರ್ ಇಲ್ಲಿ ಸೋತಿದ್ದರು. ಬೈಂದೂರು ವಿಧಾನಸಭೆ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿದ್ದರೂ ಮಾಜಿ ಸಿಎಂ ಬಿಎಸ್ ವೈ ಅವರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಅನ್ನೋದು ವಿಶೇಷ.

ಕಾಂಗ್ರೆಸ್-ಬಿಜೆಪಿಗೆ 50-50 ಕ್ಷೇತ್ರ ಈ ಕಾರಣಕ್ಕೆ ಬೈಂದೂರು ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಿಎಸ್ ವೈ ಪ್ರಭಾವ ಕೆಲಸ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇದೇ ಕಾರಣಕ್ಕೆ ಬೆಟ್ಟಿಂಗ್ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ 50-50 ಕ್ಷೇತ್ರ ಎನಿಸಿದೆ.

ಕಾಂಗ್ರೆಸ್ ನ ಗೋಪಾಲ್ ಪೂಜಾರಿ ಮತ್ತು ಬಿಜೆಪಿಯ ಸುಕುಮಾರ್ ಶೆಟ್ಟಿ ಪರ ಇಲ್ಲಿ ಸಮಾನವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಕಳೆದೆರಡು ದಿನಗಳಿಂದ ಸುಕುಮಾರ್ ಶೆಟ್ಟಿಯವರ ಬೆಟ್ಟಿಂಗ್ ಮೌಲ್ಯ ಹೆಚ್ಚುತ್ತಿದ್ದು, ಇದು ಬಿಜೆಪಿ ವಲಯದಲ್ಲಿ ಸಂತಸಕ್ಕೂ ಕಾರಣವಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (3) ಅಸಮ್ಮತ (3) ಖಂಡಿಸುವೆ (3) ಅಭಿಪ್ರಾಯವಿಲ್ಲ (0)