ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌!

0
627

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಶೇ. 4ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಕಳೆದ ಬಾರಿ ಶೇ. 67.87 ರಷ್ಟು ಫಲಿತಾಂಶ ಬಂದಿತ್ತು.

ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಎರಡನೇ ಸ್ಥಾನವನ್ನ ಉತ್ತರ ಕನ್ನಡ ಜಿಲ್ಲೆ ಹಾಗೂ ಚಿಕ್ಕೋಡಿ ತೃತೀಯ ಸ್ಥಾನ ಪಡೆದುಕೊಂಡಿದೆ.ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಎಸ್‌ಎಸ್‌ಎಲ್‌ಸಿ ಬೋರ್ಡ್‌ನಲ್ಲಿ ನಿರ್ದೇಶಕಿ ಸುಮಂಗಲ, ಶಾಲಿನಿ ರಂಜಿನಿಶ್ ಫಲಿತಾಂಶ ಪ್ರಕಟಿಸಿದರು.

ಈ ಬಾರಿ 625ಕ್ಕೆ 625 ಅಂಕಗಳನ್ನ ಇಬ್ಬರು ವಿದ್ಯಾರ್ಥಿಗಳು ಪಡೆದುಕೊಂಡಿದ್ದರೆ, 625ಕ್ಕೆ 624 ಅಂಕಗಳನ್ನ 8ವಿದ್ಯಾರ್ಥಿಗಳು ಹಾಗೂ 625ಕ್ಕೆ 623 ಅಂಕಗಳನ್ನ 12 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಈ ಸಲವೂ ವಿದ್ಯಾರ್ಥಿನಿಯರೇ ಮೆಲುಗೈ ಸಾಧಿಸಿದ್ದಾರೆ.

ಉಡುಪಿ- ಪ್ರಥಮ ಸ್ಥಾನ ಶೇ. 88.18
ಉತ್ತರ ಕನ್ನಡ – ಎರಡನೇ ಸ್ಥಾನ ಶೇ. 88.12
ಚಿಕ್ಕೋಡಿ – ತೃತೀಯ ಸ್ಥಾನ ಶೇ. 87.01
ಯಾದಗಿರಿ- ಕೊನೆಯ ಸ್ಥಾನ ಶೇ. 35.54

ಅತಿ ಹೆಚ್ಚಯ ಅಂಕಗಳಿಸಿರುವ ವಿದ್ಯಾರ್ಥಿಗಳ ವಿವರ
625ಕ್ಕೆ 625 ಅಂಕ ಗಳಿಸಿದವರು- 2 ವಿದ್ಯಾರ್ಥಿಗಳು
624 ಅಂಕ ಪಡೆದ 8 ವಿದ್ಯಾರ್ಥಿಗಳು
623 ಅಂಕ ಪಡೆದ 12ವಿದ್ಯಾರ್ಥಿಗಳು
622 ಅಂಕ ಪಡೆದ 22 ವಿದ್ಯಾರ್ಥಿಗಳು
621 ಅಂಕ ಪಡೆದ 35 ವಿದ್ಯಾರ್ಥಿಗಳು
620 ಅಂಕ ಪಡೆದುಕೊಂಡ 39 ವಿದ್ಯಾರ್ಥಿಗಳು

6 ಸರ್ಕಾರಿ ಶಾಲೆ ಸೇರಿ ಒಟ್ಟು 43 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಹೊರಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೆಲುಗೈ ಸಾಧಿಸಿದ್ದಾರೆ.

ಜೂನ್ 21ರಿಂದ28 ವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಉತ್ತರ ಪತ್ರಿಕೆ ಪ್ರತಿ ಪಡೆಯಲು ಮೇ 9 ರಿಂದ ಮೇ 18 ಕೊನೆ ದಿನವಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮೇ 11 ರಿಂದ ಮೇ 21 ಕೊನೆ ದಿನವಾಗಿದೆ. ಉತ್ತರ ಪತ್ರಿಕೆ ಫೋಟೊ ಕಾಪಿ ಪಡೆಯಲು ಒಂದು ವಿಷಯಕ್ಕೆ 305 ರೂ ದರ ನಿಗದಿಪಡಿಸಲಾಗಿದ್ದು, ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 705 ರೂಪಾಯಿ ಪಾವತಿಸಬೇಕಾಗಿದೆ. ಆನ್ ಲೈನ್ ಮೂಲಕ ಉತ್ತರ ಪತ್ರಿಕೆ, ಮರು ಮೌಲ್ಯಮಾಪನ ಅರ್ಜಿ ಸಲ್ಲಿಸಬಹುದು ಎಂದು ಎಸ್‌ಎಸ್‌ಎಲ್‌ಸಿ ಬೋರ್ಡ್‌ ತಿಳಿಸಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)