ಕುಂದಾಪುರ : ಕೆರೆಗೆ ಈಜಲು ಹೋದ ಐವರಲ್ಲಿ ಇಬ್ಬರು ನೀರುಪಾಲು

0
176

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಈಜಾಡಲು ಇಳಿದ ಈರ್ವರು ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.

ಕೋಟೇಶ್ವರ ಕಾಗೇರಿ ಸರ್ಕಾರಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸಚಿನ್(19) ಹಾಗೂ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಪುತ್ರ ಕೀರ್ತನ್(19) ನೀರುಪಾಲಾದ ವಿದ್ಯಾರ್ಥಿಗಳು.

ಅಂತಿಮ ಪರೀಕ್ಷೆಗಾಗಿ ಹಾಲ್ ಟಿಕೆಟ್ ಪಡೆದು  ಮನೆಗೆ ಹಿಂತಿರುಗುವಾಗ ಅಲ್ಲೇ ಹತ್ತಿರವಿದ್ದ ಕೆರೆಗೆ ಸಚಿನ್, ಕೀರ್ತನ್ ಸೇರಿದಂತೆ ಮೂವರು ಬಂದಿದ್ದು, ಈ ವೇಳೆಯಲ್ಲಿ ಸಚಿನ್ ಹಾಗೂ ಕೀರ್ತನ್ ಈಜಾಡಲೆಂದು ಕೆರೆಗೆ ಇಳಿದಿದ್ದರು.

ಒಬ್ಬ ವಿದ್ಯಾರ್ಥಿ ಕೆರೆಯ ದಡದಲ್ಲೇ ಕೂತಿದ್ದನು. ನೀರಿಗೆ ಇಳಿದ ಈರ್ವರು ವಿದ್ಯಾರ್ಥಿಗಳು ಮೇಲೆ ಬಾರದಿದ್ದನ್ನು ಗಮನಿಸಿದ ಇನ್ನೋರ್ವ ವಿದ್ಯಾರ್ಥಿ ಸ್ಥಳೀಯರಿಗೆ ಸುದ್ದಿ ತಿಳಿಸಿದ್ದನು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ವಿದ್ಯಾರ್ಥಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದು, ಕೀರ್ತನ್ ಮೃತದೇಹ ಪತ್ತೆಯಾಗಿದೆ. ಸಚಿನ್‌ಗಾಗಿ ಶೋಧ ಕಾರ್ಯ ಮುಂದವರಿಸಲಾಗಿದೆ. ವಿದ್ಯಾರ್ಥಿ ಸಚಿನ್ ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡಾಪಟುವಾಗಿ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ

ಕುಂದಾಪುರ ಠಾಣಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia