ದ. ಆಫ್ರಿಕಾ: ಭಾರತೀಯ ಮೂಲದ ಕುಟುಂಬದ ಮನೆಯ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ,ಮೂವರು ಮಕ್ಕಳೂ ಸೇರಿ ಐವರು ಮೃತ

0
175

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಮನೆಯೊಂದರ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ್ದು, ಮೂವರು ಮಕ್ಕಳೂ ಸೇರಿದಂತೆ ಭಾರತೀಯ ಮೂಲದ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಕಳೆದ 25 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಅಜೀಜ್‌ ಮಾಂಜ್ರಾ (45) ಮತ್ತು ಅವರ ಪತ್ನಿ ಗೋರಿ ಬೀಬಿ (ದ.ಆಫ್ರಿಕಾ ಪ್ರಜೆ), ಮಕ್ಕಳಾದ ಝುಬಿನಾ (18), ಮೈರೂನ್ನೀಸಾ (14) ಮತ್ತು ಮುಹಮ್ಮದ್‌ ರಿಜ್ವಾನ್‌ (10) ತಮ್ಮ ಮನೆಯಲ್ಲಿ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಹದಿನೈದು ದಿನಗಳ ಹಿಂದೆಯಷ್ಟೇ ಈ ಕುಟುಂಬ ತಮ್ಮ ಸ್ವಂತ ಮನೆಗೆ ಬಂದಿತ್ತು. ಅಂಗಡಿಯೊಂದರಲ್ಲಿ ಸಹಾಯಕನಾಗಿ ದುಡಿಯುತ್ತಿರುವ ಮಾಂಜ್ರಾ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಕನಸಿನ ಮನೆಯನ್ನು ಕಟ್ಟಿಕೊಂಡಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ತಮ್ಮ ಹೆಸರು ಹೇಳಲಿಚ್ಚಿಸದ ನೆರೆಮನೆಯ ಮಹಿಳೆ, ತಮ್ಮ ಮನೆಯ ಚಾವಣಿ ಮೇಲೆ ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಯಾರೋ ನಡೆದಾಡಿದ ಶಬ್ದ ಕೇಳಿ ಎಚ್ಚರವಾಯಿತು ಎಂದು ‘ದಿ ಮರ್ಕ್ಯುರಿ’ ಪತ್ರಿಕೆಗೆ ತಿಳಿಸಿದರು.

‘ವ್ಯಕ್ತಿಯೊಬ್ಬ ‘ಅಲ್ಲಾಹ್‌’ ಎಂದು ಕೂಗಿಕೊಂಡ. ಬಳಿಕ ಮನೆಯವರು ಕಿರುಚಿಕೊಂಡ ಸದ್ದು ಕೇಳಿಸಿತು. ನನಗೆ ಭಯವಾಯಿತು. ಹಾಗಾಗಿ ಏನಾಯಿತೆಂದು ನೋಡಲು ಹೋಗಲಿಲ್ಲ’ ಎಂದು ಆಕೆ ತಿಳಿಸಿದರು.

‘ಬಳಿಕ ಮತ್ತೊಂದು ಮನೆಯವರಿಗೆ ಕರೆ ಮಾಡಿ ತಿಳಿಸಿದೆ. ಅವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಕರೆ ಮಾಡಿ ತಿಳಿಸಿದರು’ ಎಂದು ಆಕೆ ಹೇಳಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)