ಬೈಂದೂರು : ಮೀನುಗಾರ ಮಹಿಳೆಯರಿಗೆ ಹಲ್ಲೆ, ಪ್ರಕರಣ ದಾಖಲು

0
297

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಬೈಂದೂರು: ಮೀನುಗಾರ ಮಹಿಳೆಯರಿಗೆ ಹಲ್ಲೆ ಮಾಡಿದ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಏ.12ರಂದು ಸಂಜೆ ಮಲ್ಲಿಕಾರ್ಜುನ ಹಾಗೂ ಅವರ ಪತ್ನಿ ಪ್ರೇಮಾ ಗಿರಿಜಾ ಹಾಗೂ ಸೀತಾ ಖಾರ್ವಿಯವರಿಗೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.ಸೀತಾ ಖಾರ್ವಿ ಹೋಟೆಲ್ ಕಡೆ ನಡೆದಾಗ ಬಂಕೇಶ್ವರ ರಸ್ತೆಯ ರೈಲ್ವೆ ಗೇಟಿನ ಬಳಿ ಮಲ್ಲಿಕಾರ್ಜುನ ಮತ್ತು ಅವರ ಪತ್ನಿ ಪ್ರೇಮಾ ಯಾರಿಗೋ ಹಲ್ಲೆ ಮಾಡುತ್ತಿರುವ ಮಾಹಿತಿ ಬಂತು ಅದರಂತೆ ಮೀನು ಮಾರಾಟ ಮಾಡುವ ಇತರ 75 ಜನ ಮೀನು ಮಾರಾಟ ಮಹಿಳೆಯರ ಜೊತೆ ಸೇರಿ ಮಲ್ಲಿಕಾರ್ಜುನ ಅವರಲ್ಲಿ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಲ್ಲಿಕಾರ್ಜುನ ಮತ್ತು ಪ್ರೇಮಾ ಸೇರಿ ಸೀತಾ ಖಾರ್ವಿ ಅವರಿಗೆ ಹಾಗೂ ಜೊತೆಯಲ್ಲಿದ್ದ ಗಿರಿಜಾ ಖಾರ್ವಿಯವರಿಗೆ ದೊಣ್ಣಯಿಂದ ಹೊಡೆದ ಪರಿಣಾಮ ಸೀತಾ ಖಾರ್ವಿಯವರಿಗೆ ತಲೆ, ಎದೆ,ಹಣೆಗೆ ಹಾಗೂ ಭುಜಕ್ಕೆ ಗಾಯಗಳಾಗಿವೆ.ಗಿರಿಜಾ ಅವರ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನದ ಸರ ಹಾಗೂ ಸೊಂಟದಲ್ಲಿದ್ದ ಮೂರು ಸಾವಿರ ರೂಪಾಯಿ ಹಣ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಬಳಿಕ ಗಾಯಗೊಂಡ ಮಹಿಳೆಯನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ. ಸೀತಾ ಖಾರ್ವಿ ನೀಡಿದ ದೂರಿನಂತೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)