ಶಿರೂರು:ಮಕ್ಕಳ ಹಬ್ಬ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0
336

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

     

ಬೈಂದೂರು ,ಏ.13: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲು ಶಿರೂರು ಇದರ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ  ಶಾಲಾ ಸಭಾ ವೇದಿಕೆಯಲ್ಲಿ ನಡೆಯಿತು.

ಕ್ಷೇತ್ರ ಸಮನ್ವಯಾ„ಕಾರಿ ಅಬ್ದುಲ್ ರವೂಪ್ ಶಾಲಾ ಮಕ್ಕಳ ಕೈಬರಹ ಪುಸ್ತಕವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರ ಬೆಳವಣಿಗೆಗೆ ಪೂರಕವಾಗಿರುವುದಿಲ್ಲ.ಬದಲಾಗಿ ಶಿಕ್ಷಣದ ಜೊತೆಗೆ ತಾಯಿಯ ಪ್ರೀತಿ ಮನೆಯ ವಾತಾವರಣ ಕೂಡ ಅವಶ್ಯಕವಾಗಿರುತ್ತದೆ.ನಮ್ಮ ಪರಿಸರ ಹಾಗೂ ಸಮಾಜದ ಅರಿವನ್ನು ಮಕ್ಕಳಿಗೆ ಮೂಡಿಸಬೇಕು ಎಂದರು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಮನೋಜ್ ಕುಮಾರ್,ಶಿರೂರು ಪಂಚಾಯತ್ ಅಭಿವೃದ್ದಿ ಅ„ಕಾರಿ ಮಂಜುನಾಥ ಶೆಟ್ಟಿ, ಉದ್ಯಮಿ ಪ್ರಕಾಶ ಪ್ರಭು,ಶಿರೂರು ಜೆ.ಸಿ.ಐ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಮಣೆಗಾರ್ ಅಬ್ದುಲ್ ರೆಹಮಾನ್,ವೆಂಕ್ಟಯ್ಯ ಬಿಲ್ಲವ,ಮಂಜುನಾಥ ಪೂಜಾರಿ ಬಾಳೆಗದ್ದೆ ಹಾಗೂ ಶಾಲಾ ಎಸ್.ಡಿ.ಎಮ್.ಸಿ ಸದಸ್ಯರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸರೋಜಾ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ರಾಮಕೃಷ್ಣ ದೇವಾಡಿಗ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)