ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ 13ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

0
229

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು,ಏ.10: ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡ ಕಳವಾಡಿ ಬೈಂದೂರು ಇದರ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಕಳವಾಡಿಯಲ್ಲಿ ನಡೆಯಿತು.

ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಮಾರಿಕಾಂಬಾ ಯೂತ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐ.ಎಫ್.ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಶುಭಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ,ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಬಸ್ರೂರು ರಾಜೀವ ಶೆಟ್ಟಿ, ಎಚ್.ವಸಂತ ಹೆಗ್ಡೆ, ಡಾ| ಬಳ್ಕೂರು ಗೋಪಾಲ ಆಚಾರ್ಯ,ಕೆರಾಡಿ ವರಸಿದ್ದಿವಿನಾಯಕ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ನಟ,ನಿರ್ದೇಶಕ ರವಿ ಬಸ್ರೂರು,ಉದ್ಯಮಿ ಬಾಬು ಪೂಜಾರಿ,ನಿವೃತ್ತ ಶಿಕ್ಷಕ ಕೃಷ್ಣಯ್ಯ ಶೇರುಗಾರ್,ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ ಕಳವಾಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟಕ ಚಲನಚಿತ್ರ ಖ್ಯಾತಿಯ ಬಾಲನಟಿ ಶ್ಲಾಘಾ ಸಾಲಿಗ್ರಾಮ, ಡ್ರಾಮ ಜೂನಿಯರ್ ವಿಜೇತೆ ಶ್ರಾವ್ಯ ಎಸ್.ಆಚಾರ್ಯ ಮರವಂತೆ,ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಜಿ.ಹನುಮಂತ,ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸ್ವೀಕೃತಿ ಶೆಟ್ಟಿ ನೆಲ್ಯಾಡಿ, ಅಂತರಾಷ್ಟ್ರೀಯ ಯೋಗಪಟು ಕುಶ ಪೂಜಾರಿ ಹಾಗೂ ವೀಕ್ಷಕ ವಿವರಣೆಗಾರ ರವಿ ಮಯ್ಯಾಡಿಯವರನ್ನು ಸಮ್ಮಾನಿಸಲಾಯಿತು.

ಬಾಲರಾಜ್ ಸ್ವಾಗತಿಸಿದರು.ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)