ಮುಲ್ಲಿಬಾರು: ಕಾನನದಲ್ಲೊಂದು ಚಿಣ್ಣರ ರಂಗ ಚಿಲಿಪಿಲಿ ಕಾರ್ಯಕ್ರಮ

0
198

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಶಿರೂರು: ಜೆ.ಸಿ.ಐ ಶಿರೂರು ಹಾಗೂ ಸ.ಹಿ.ಪ್ರಾ.ಶಾಲೆ ಮುಲ್ಲಿಬಾರು ಇದರ ಸಹಯೋಗದಲ್ಲಿ ಚಿಣ್ಣರ ರಂಗ ಚಿಲಿಪಿಲಿ ಕಾರ್ಯಕ್ರಮ ಕೆ.ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ನಡೆಯಿತು.

ಶಿರೂರು ಜೆ.ಸಿ.ಐ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ವಿಷಯಗಳು ಅವರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತದೆ.ಕೇವಲ ಶಿಕ್ಷಣ ಮಾತ್ರ ಬೆಳವಣಿಗೆಗೆ ಸಾದ್ಯವಾಗುವುದಿಲ್ಲ.ಬದಲಿಗೆ ಬದುಕಿಗೆ ಬೇಕಾಗುವ ಅಂಶಗಳನ್ನು ಸಹ ಎಳವೆಯಲ್ಲಿ ಕಲಿಸಿಕೊಡಬೇಕು.ರಂಗ ಭೂಮಿ ಆಸಕ್ತಿ ಮಕ್ಕಳನ್ನು ಚುರುಕುಗೊಳಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಪಿ.ಮೇಸ್ತ, ಶಿಕ್ಷಕ ಸುಧಾಕರ ಪಿ.ಬೈಂದೂರು, ಹಾಲೇಶಪ್ಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಭೀಮೇಶ್ ಎಚ್.ಎನ್.ರವರನ್ನು ಸಮ್ಮಾನಿಸಲಾಯಿತು.

ಶಿಕ್ಷಕ ರಾಮನಾಥ ಪಿ.ಮೇಸ್ತ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)