ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಪ್ರಯುಕ್ತ ಬೈಂದೂರು ಮಹಿಳಾ ಮೋರ್ಚಾದ ವತಿಯಿಂದ ಮನೆ ಮನೆ ಸಂಪರ್ಕ

0
331

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

 

ಬೈಂದೂರು : ಭಾರತೀಯ ಜನತಾ ಪಕ್ಷದ 38ನೇ ಸಂಸ್ಥಾಪನಾ ದಿನದ ಪ್ರಯುಕ್ತ ಬೈಂದೂರು ಮಹಿಳಾ ಮೋರ್ಚಾದ ವತಿಯಿಂದ ಎಲ್ಲಾ 243 ಬೂತಗಳಲ್ಲಿ ಮನೆ ಮನೆಗೆ ಬೇಟಿ ಮಾಡಿ ಮೋದಿ ಸರಕಾರ ಹಾಗೂ ಯಡಿಯೂರಪ್ಪ ಸರಕಾರದ ಮಹಿಳಾ ಸಬಲೀಕರಣದ ಪ್ರಮುಖ ಕಾರ್ಯಕ್ರಮಗಳನ್ನು ತಿಳಿಸಿದರು.

ಕಾರ್ಯಕ್ರಮಕ್ಕೆ ಮಹಿಳಾ ಮೋರ್ಚಾ ಅಧ್ಯಕ್ಷೆ  ಪ್ರಿಯದರ್ಶಿನಿ ಬೇಸ್ಕೂರ್ ಚಾಲನೆ  ನೀಡಿ ಮಾತನಾಡಿದ ಅವರು ಮೋದಿ ಸರಕಾರದ ಮಹಿಳಾ ಸಬಲೀಕರಣದ ಪ್ರಮುಖ ಕಾರ್ಯಕ್ರಮಗಳು ಬೇಟಿ ಬಚಾವೋ- ಬೇಟಿ ಪಡಾವೋ, ಸುಕನ್ಯ ಸಮೃದ್ಧಿ ಯೋಜನೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಉಜ್ವಲ ಯೋಜನೆ, ಸುರಕ್ಷತಿ ಮಾತೃತ್ವ,  ಮಹಿಳಾ ನೇತೃತ್ವದ ವಿಕಾಸ್, ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಹಾಗೆ ಯಡಿಯೂರಪ್ಪ ಸರಕಾರ ಭಾಗ್ಯಲಕ್ಷ್ಮೀ, ತಾಯಿಗೆ ಮಡಿಲು ಕಿಟ್ಸ್, 108 ಅಂಬ್ಯುಲೆನ್ಸ್, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಮಕ್ಕಳಿಗೆ ಸೈಕಲ್, ಸಂಧ್ಯಾ ಸುರಕ್ಷಾ, ಹಲವಾರು ಕಾರ್ಯಕ್ರಮಗಳನ್ನು ಸ್ವತಃ ಯಡಿಯೂರಪ್ಪನವರೇ ಅಸಕ್ತಿ ವಹಿಸಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.

ಅನಿತಾ ಆರ್.ಕೆ ವಂಡ್ಸೆ, ಅಶ್ವಿನಿ ಶೆಟ್ಟಿ, ಮಾಲತಿ ನಾಯ್ಕ್ ಹಾಗೂ ಮಹಿಳಾ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)