ಬಿಜೂರು ಗ್ರಾಮ ಪಂಚಾಯತ್ ಹೈ ಡ್ರಾಮ: ಫಲಿಸದ ಕಾಣದ ಕೈ ತಂತ್ರ!

1
589

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಠುಸ್ / ಅವಿಶ್ವಾಸ ಗೊತ್ತುವಳಿಯಲ್ಲಿ ವಿಶ್ವಾಸದ ಗೆಲುವು

 ಉಪ್ಪುಂದ, ಮಾ.14 : ಬಿಜೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಇಬ್ಬರ ಸದಸ್ಯರ ಅಸಮಾಧಾನದಿಂದಾಗಿ ಅಧ್ಯಕ್ಷರ ವಿರುದ್ಧ ಮಾಡಲಾದ ಅವಿಶ್ವಾಸಗೊತ್ತುವಳಿಯು ಹೈ ಡ್ರಾಮದೊಂದಿಗೆ ಮಂಗಳವಾರ ಕೊನೆಗೊಂಡಿತು.

18ಜನ ಸದಸ್ಯರಲ್ಲಿ 12ಜನ ಸದಸ್ಯರು ಗ್ರಾ.ಪಂ.ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿತ್ತು. ಆದರೆ ಅವಿಶ್ವಾಸ ಗೊತ್ತುವಳಿಗೆ ಅಗತ್ಯ ಕೋರಂ ಇಲ್ಲದ ಕಾರಣ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ತಿರಸ್ಕøತಗೊಂಡಿತು.

ಘಟನೆ ಹಿನ್ನಲೆ : ಬಿಜೆಪಿ ಬೆಂಬಲಿತ 9ಸದಸ್ಯರು ಹಾಗೂ 9 ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನೊಳಗೊಂಡ ಬಿಜೂರು ಪಂಚಾಯತ್‍ನಲ್ಲಿ 2015ರಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಲೋಲಾಕ್ಷಿ ದೇವಾಡಿಗ ಅಧ್ಯಕ್ಷರಾಗಿ ಆಯ್ಕೆಗೊಂಡಿರುತ್ತಾರೆ. ಹಿಂದಿನ ಎರಡು ವರ್ಷದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸಗೊತ್ತುವಳಿ ಮಂಡನೆ ಆಗಿರುವುದಿಲ್ಲ. ಫೆ.9ರಂದು 12ಜನ ಸದಸ್ಯರ ಸಹಿ ಇದ್ದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಸಹಾಯಕ ಕಮೀಷನರ್‍ಗೆ ಸಲ್ಲಿಸಲಾಗುತ್ತದೆ. ಫೆ.22ರಂದು ಎಲ್ಲ ಸದಸ್ಯರಿಗೂ ನೋಟಿಸ್ ನೀಡುವ ಮೂಲಕ ಅವಿಶ್ವಾಸ ಗೊತ್ತುವಳಿಗೆ ಮಾ.13ರಂದು ಬೆಳಗ್ಗೆ 10ಗಂಟೆಗೆ ಹಾಜರಿರಲು ತಿಳಿಸಲಾಗುತ್ತದೆ.

ಗೈರು ಹಾಜರಾದ ಸದಸ್ಯರು : ಸಹಾಯಕ ಕಮೀಷನರ್ ಟಿ.ಭೂಬಾಲನ ಇವರ ಅಧ್ಯಕ್ಷತೆಯಲ್ಲಿ 10ಗಂಟೆಗೆ ಸಭೆ ಆರಂಭಿಸಲಾಗುತ್ತದೆ. 18 ಸದಸ್ಯರ ಪೈಕಿ ಒಬ್ಬ ಸದಸ್ಯ ಹಾಜರಾಗಿದ್ದು ಉಳಿದವರು ಗೈರು ಹಾಜರಾಗುತ್ತಾರೆ. ಆಗ ಸಮಯವನ್ನು ವಿಸ್ತರಿಸಲಾಗುತ್ತದೆ. ಆ ಬಳಿಕವು ಬಾಕಿ ಸದಸ್ಯರು ಹಾಜರಾಗುವುದಿಲ್ಲ, ಅಗತ್ಯ ಕೋರಂ ಇಲ್ಲದೇ ಇರುವುದರಿಂದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತವಳಿಯನ್ನು ಬೆಂಬಲಿಸುವವರು ಕೈ ಎತ್ತುವ ಮೂಲಕ ಮತ ಚಲಾಯಿಸುವಂತೆ ಸೂಚಿಸುವ ಪ್ರಕ್ರಿಯೆ ಇರುವುದಿಲ್ಲ. ಅವಿಶ್ವಾಸ ಗೊತ್ತುವಳಿಗೆ ಅಗತ್ಯ ಕೋರಂ ಇಲ್ಲದೇ ಇರುವುದರಿಂದ ಅವಿಶ್ವಾಸ ಗೊತ್ತುವಳಿ ತಿರಸ್ಕøತವಾಗಿದೆ ಎಂದು ತೀರ್ಮಾನಿಸಿ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.

ಹೈಜಾಕ್ : ಈ ನಡುವೆ ಕಾಂಗ್ರಸ್ ಬೆಂಬಲಿತ ಸದಸ್ಯರಾದ ಲಕ್ಷ್ಮೀ ಚಾರಕೊಡ್ಲು ಮತ್ತು ಲಕ್ಷ್ಮೀ ಕುಲಾಲ ಇವರ್ನು ಮಾ.11ರಂದು ರಾತ್ರಿ ಸಮಯದಲ್ಲಿ ಯಾರೋ ಮೂವರು ಮನೆಯಿಂದ ಹೊರಗೆ ಬರುವಂತೆ ಹೇಳಿ ಕರೆದುಕೊಂಡು ಹೋಗಿದ್ದು, ಹುಡುಕಾಡಿದರು ಮಾ.12ರ ವರೆಗೆ ಪತ್ತೆ ಆಗಿರುವುದಿಲ್ಲ, ಮೊಬೆಲ್ೈ ಕೂಡಾ ಸ್ವೀಚ್ ಆಫ್ ಆಗಿರುತ್ತದೆ ಎಂದು ಮನೆಯವರು ಬೈಂದೂರು ಪೊಲೀಸ್ ಠಾಣೆಗೆ ದೂರು ದಾಖಲಿಸುತ್ತಾರೆ.

ಸದಸ್ಯರಾದ ಲಕ್ಷ್ಮೀ ಚಾರಕೊಡ್ಲು ಮತ್ತು ಲಕ್ಷ್ಮೀ ಕುಲಾಲ ಇವರು ಬಿಜೆಪಿ ಮುಖಂಡರೊಂದಿಗೆ ಗ್ರಾ.ಪಂ. ಆಗಮಿಸಿ ಮಾತನಾಡಿದ ಅವರು ನಮ್ಮನ್ನು ಯಾರು ಕರೆದುಕೊಂಡು ಹೋಗಿಲ್ಲ, ಯಾರ ಒತ್ತಡಕ್ಕೆ ಒಳಗಾಗಿಲ್ಲ, ತಮ್ಮ ಸ್ವಇಚ್ಚೆಯಿಂದ ಬಿಜೆಪಿಗೆ ಸೇರುವುದಾಗಿ ತಿಳಿಸಿದ್ದಾರೆ.
ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಎಲ್ಲರನ್ನು ಒಂದೂಗೂಡಿಸಿಕೊಂಡು ಹೋಗುವ ಕೆಲಸಕ್ಕೆ ಜಯ ಸಿಕ್ಕಿದೆ. ಹಿಂದಿನಿಂದ ಆರೋಪ ಮಾಡುವವರಿಗೆ ಧಿಕ್ಕಾರ – ಲೋಲಾಕ್ಷಿ ದೇವಾಡಿಗ ಅಧ್ಯಕ್ಷರು

ವರದಿ : ಕೃಷ್ಣ ಬಿಜೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)