ಚಿತ್ತೂರು : ಬ್ರಹ್ಮಯಕ್ಷಿ ಕ್ರಿಕೆಟ್ ಟ್ರೊಫಿ – ಅನುಗೃಹ ಚಿತ್ತೂರು ಪ್ರಥಮ ಸ್ಥಾನ

0
150
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಚಿತ್ತೂರು : ಬ್ರಹ್ಮಯಕ್ಷಿ ಕ್ರಿಕೆಟ್ ಟ್ರೊಫಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ವಂಡ್ಸೆ ಶಕ್ತಿ ಕೇಂದ್ರ ಅದ್ಯಕ್ಷ ಶ್ರೀ ರಾಮಚಂದ್ರ ಮಂಜರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಡಾ.ಅತುಲ್ ಕುಮಾರ ಶೆಟ್ಟಿಯವರು ಚಿತ್ತೂರು ಫ್ರೆಂಡ್ಸ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಭಾಗದ ಇತರರಿಗೆ ಉತ್ತಮ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಚಿತ್ತೂರು ಪೂಜಾ ಬಾರಿನ ಮಾಲಿಕ ಪ್ರೀತಮ್ ಶೆಟ್ಟಿ ಹಾಗೂ ಚಿತ್ತೂರು ಬಿಜೆಪಿ ಸ್ಥಾನೀಯ ಸಮಿತಿ ಅದ್ಯಕ್ಷ ರವಿರಾಜ ಶೆಟ್ಟಿಯವರು ಪ್ರಥಮ ಬಹುಮಾನವಾಗಿ 10000 ರೂಪಾಯಿ ಚೆಕ್ ನ್ನು ವಿಜೇತರಾದ ಅನುಗೃಹ ಚಿತ್ತೂರು ತಂಡದವರಿಗೆ ನೀಡಿದರು.

ದ್ವಿತೀಯ ಬಹುಮಾನ 7000 ರೂಪಾಯಿ ಚೆಕ್ ನ್ನು ಈಶಾನಿ ಗ್ರೂಪ್ ಶೆಟ್ರಕಟ್ಟೆ ತಂಡದವರಿಗೆ ವಿಶ್ವಕರ್ಮ ಯುವ ಒಕ್ಕೂಟದ ಅದ್ಯಕ್ಷ ದಿವಾಕರ ಆಚಾರ್ಯ ನೀಡಿದರು. ಟ್ರೋಪಿಯನ್ನು ಚಿತ್ತೂರು ಗ್ರಾಮ ಪಂಚಾಯತ ಸದಸ್ಯ ಪ್ರದೀಪ ಶೆಟ್ಟಿಯವರು ನೀಡಿದರು.

ಈ ಸಂದರ್ಭದಲ್ಲಿ ಚಿತ್ತೂರು ಬಿಜೆಪಿ ಸ್ಥಾನೀಯ ಸಮಿತಿ ಅದ್ಯಕ್ಷ ರವಿರಾಜ ಶೆಟ್ಟಿ , ಗ್ರಾಮ ಪಂಚಾಂiÀiತ್ ಅದ್ಯಕ್ಷ ಸಂತೋಷ ಮಡಿವಾಳ , ಗ್ರಾಮ ಪಂಚಾಯತ ಸದಸ್ಯ ಪ್ರದೀಪ ಶೆಟ್ಟಿ , ವಿಶ್ವಕರ್ಮ ಯುವ ಒಕ್ಕೂಟದ ಅದ್ಯಕ್ಷ ದಿವಾಕರ ಆಚಾರ್ಯ , ಇಡೂರು ಗ್ರಾಮ ಪಂಚಾಯತ ಸದಸ್ಯ ರಾಜೀವ ಶೆಟ್ಟಿ , ಪ್ರವೀಣ ಶೆಟ್ಟಿ ಹೊಸೂರು , ಚಿತ್ತೂರು ಭಜರಂಗದಳ ಸಂಚಾಲಕ ಶಬರೀಶ ಪೂಜಾರಿ , ನಿವೃತ್ತ ವಿಜಯ ಬ್ಯಾಂಕ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.

ಬಿಜೆಪಿ ಸ್ಥಾನೀಯ ಸಮಿತಿ ಅದ್ಯಕ್ಷ ರವಿರಾಜ ಶೆಟ್ಟ ಸ್ವಾಗತಿಸಿದರು , ವಿಶ್ವಕರ್ಮ ಯುವ ಒಕ್ಕೂಟದ ಅದ್ಯಕ್ಷ ದಿವಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಚಿತ್ತೂರು ಗ್ರಾಮ ಪಂಚಾಯತ ಸದಸ್ಯ ಪ್ರದೀಪ ವಂದನಾರ್ಪಣೆಗೈದರು.

ವರದಿ : ರಕ್ಷಿತ ಕುಮಾರ ಶೆಟ್ಟಿ ವಂಡ್ಸೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)