ಅಮೆಜಾನ್ ಗೆ 1 ಕೋಟಿ 30 ಲಕ್ಷ ರೂ. ಟೋಪಿ ಹಾಕಿದ ಖದೀಮರು ಅಂದರ್

0
91

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಚಿಕ್ಕಮಗಳೂರು : ನಕಲಿ ಖಾತೆ ಕ್ರಿಯೆಟ್ ಮಾಡಿ ಒಂದು ವರ್ಷದಿಂದ ಅಮೇಜಾನ್ ಕಂಪನಿಗೆ ಒಂದು ಕೋಟಿ,30 ಲಕ್ಷ ರೂ. ಗಳನ್ನು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ದರ್ಶನ್, ಪುನೀತ್, ಸಚಿನ್ ಶೆಟ್ಟಿ ಹಾಗೂ ಅನಿಲ್ ಬಂಧಿತ ಆರೋಪಿಗಳು. ಸಾರ್ವಜನಿಕರು ಅಮೇಜಾನ್ ನಲ್ಲಿ ಬುಕ್ ಮಾಡಿದ ವಸ್ತು ಏಕದಂತ ಕೊರಿಯರ್ ಸರ್ವೀಸ್ ಸೆಂಟರ್ ಗೆ ಬರುತ್ತಿತ್ತು. ಸರ್ವಿಸ್ ಸೆಂಟರ್ ನಿಂದ ಬಂದ ವಸ್ತುಗಳನ್ನು ಆರೋಪಿಗಳು ಡೆಲವರಿ ಮಾಡುತ್ತಿದ್ದರು.

ಗ್ರಾಹಕರ ಮೊಬೈಲ್ ಗೆ ಡೆಲವರಿ ಸೆಕ್ಸಸ್ ಪುಲ್ ಎಂದು ಮೆಸೇಜ್ ಬರುತ್ತೆ. ಆದರೆ ಗ್ರಾಹಕರು ಪಾವತಿಸುವ ಹಣ ಇವರ ಆಕೌಂಟ್ ಗೆ ಹೋಗುವ ಹಾಗೆ ಮಾಸ್ಟರ್ ಮೈಂಡ್ ಮಾಡಿದ್ದರು. ಒಂದು ವರ್ಷದಿಂದ ಅಮೇಜಾನ್ ಕಂಪನಿಗೆ ಒಂದು ಕೋಟಿ 30 ಲಕ್ಷ ರೂ.ಹಣವನ್ನು ಮೋಸ ಮಾಡಿದ್ದಾರೆ.

ಸದ್ಯ ಪೊಲೀಸರು ಬುಲೆಟ್, ಎರಡು ಪಲ್ಸರ್, ಒಂದು ಜಿಕ್ಸರ್ ಬೈಕ್ ಗಳು ಸೇರಿದಂತೆ 6 ಲಕ್ಷ 44 ಸಾವಿರ ನಗದು, 21 ಮೊಬೈಲ್ ಫೋನ್, ಲ್ಯಾಪ್ ಟಾಪ್, 2 ಟ್ಯಾಬ್ ಗಳು ಸೇರಿದಂತೆ ಲಕ್ಷಾಂತರ ರೂ. ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia