ಗೌರಿ ಹತ್ಯೆ, ಮೊದಲ ಬಂಧನ: ಮಾರ್ಚ್ 12ಕ್ಕೆ ಮದ್ದೂರು ಬಂದ್

0
130
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು, ಮಾ 10: ವಿಶೇಷ ತನಿಖಾ ದಳದ ವಶದಲ್ಲಿದ್ದ ಹಿಂದೂಪರ ಸಂಘಟನೆಯ ಮುಖಂಡ ನವೀನ್ ಕುಮಾರ್ ನನ್ನು ಬಂಧಿಸಿದ ಇಪ್ಪತ್ತು ದಿನಗಳ ನಂತರ, ಆತನನ್ನೇ ಮೊದಲ ಆರೋಪಿ (ಎ 1) ಎಂದು ಕೋರ್ಟಿಗೆ ಮಾಹಿತಿ ನೀಡಿರುವ ಎಸ್‌ಐಟಿ, ನವೀನ್ ನನ್ನು ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ.

ಸುಳ್ಳು ಸಾಕ್ಷಿಯನ್ನು ಸೃಷ್ಟಿಸಿ, ಹಿಂದೂ ಮುಖಂಡರ ಮೇಲೆ ಸರಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ಹಲವು ಹಿಂದೂಪರ ಸಂಘಟನೆಗಳು ಸೋಮವಾರ (ಮಾ 12) ಮದ್ದೂರು ಬಂದ್ ಗೆ ಕರೆನೀಡಿದೆ.

ಬಂಧಿತರಾಗಿವ ಹಿಂದೂ ಜಾಗೃತ ವೇದಿಕೆಯ ಮುಖಂಡ ಕೆ ಟಿ ನವೀನ್ ಕುಮಾರ್, ಮದ್ದೂರು ತಾಲೂಕು ಕದಲೂರು ಗ್ರಾಮದವರು. ಶುಕ್ರವಾರ (ಮಾ 9) ಸಂಜೆ ಮದ್ದೂರಿನಲ್ಲಿ ಸಭೆ ಸೇರಿದ ವಿವಿಧ ಮುಖಂಡರು, ಸರಕಾರದ ಧೋರಣೆಯನ್ನು ಖಂಡಿಸಿ ಬಂದ್ ಗೆ ಕರೆನೀಡಿದೆ.

ಫೆ. 18ರಂದು ಮೆಜೆಸ್ಟಿಕ್‌ ಬಳಿ ನವೀನ್‌ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ ಗೌರಿ ಹತ್ಯೆಯ ಅನುಮಾನ ಉಂಟಾದ ಹಿನ್ನೆಲೆಯಲ್ಲಿ ಈತನನ್ನು ಎಸ್‌ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಶುಕ್ರವಾರ ಎಸಿಎಂಎಂ ಕೋರ್ಟಿನಲ್ಲಿ ನವೀನ್ ಕುಮಾರ್ ನನ್ನು ಹಾಜರು ಪಡಿಸಲಾಗಿತ್ತು. ತನಿಖೆ ವೇಳೆಯಲ್ಲಿ ಬಯಲಾದ ಮಹತ್ವದ ಮಾಹಿತಿ ಎಂದು ಎಸ್‌ಐಟಿ ಮುಚ್ಚಿದ ಲಕೋಟೆಯಲ್ಲಿ ಕೋರ್ಟಿಗೆ ಮಾಹಿತಿ ಸಲ್ಲಿಸಿತ್ತು. ನವೀನ್ ಕುಮಾರ್ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲು ಕೋರ್ಟ್ ಅನುಮತಿ ನೀಡಿತ್ತು.

ಇದುವರೆಗೆ ಎಸ್‌ಐಟಿ ಸಂಗ್ರಹಿಸಿರುವ ದಾಖಲೆ, ಸಾಕ್ಷಿಗಳ ಪ್ರಕಾರ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ನವೀನ್ ಕುಮಾರ್ ಪಾತ್ರವಿರುವುದು ದೃಢಪಟ್ಟಿದೆ, ಮುಂದಿನ ತನಿಖೆಗೆ ತೊಂದರೆಯಾಗುವ ಕಾರಣದಿಂದ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎಸ್‌ಐಟಿ ಅನುಚೇತ್ ಹೇಳಿದ್ದಾರೆ.

ಮಾರ್ಚ್ ಹನ್ನೆರಡರಂದು ಮದ್ದೂರು ಬಂದ್ ಕರೆನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು – ಮೈಸೂರು ರಸ್ತೆಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)