ಭಾರತೀಯ ಕಮ್ಯೂನಿಸ್ಟ್ ಬೈಂದೂರು ವಲಯ ಸಮಿತಿ ವತಿಯಿಂದ ಸುಸಜ್ಜಿತ ತಾಲೂಕು ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಲು ಹಾಗೂ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಪ್ರತಿಭಟನೆ

0
331
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು : ಭಾರತೀಯ ಕಮ್ಯೂನಿಸ್ಟ್ ಸಿ.ಪಿ.ಐ(ಎಂ) ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು ಸುಸಜ್ಜಿತ ತಾಲೂಕು ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಲು ಹಾಗೂ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಬೈಂದೂರಿನ ಸಿಪಿಐ(ಎಂ) ಕಛೇರಿಯಿಂದ ಸರ್ಕಲ್, ಪೇಟೆ ಮೂಲಕ ಸರಕಾರಿ ಆಸ್ಪತ್ರೆಯ ಮುಂಬಾಗದವರೆಗೂ ಜಾಥ ನಡೆಸಿ ಆಸ್ಪತ್ರೆಯ ಎದುರು ಹಕ್ಕೊತ್ತಾಯ ಪ್ರತಿಭಟನೆ ನಡೆಸಿದರು.

  

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿ.ಪಿ.ಎಂ ಬೈಂದೂರು ವಲಯ ಕಾರ್ಯದರ್ಶಿ ಸರೇಶ್ ಕಲ್ಲಾಗರ ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ಮಕ್ಕಳ ಮತ್ತು ತಾಯಂದಿರ ತಪಾಸಣೆ ಹೆಚ್ಚುವರಿ ಸೌಲಭ್ಯಕ್ಕಾಗಿ ಪ್ರಸುತ್ತ 7 ಮಂದಿಯ ಹುದ್ದೆ ಪೈಕಿ ಐವರು ಕಾರ್ಯ ನಿರತರಾಗಿರುವುದರಿಂದ ಬಾಕಿ ಇರುವ 2 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಬೈಂದೂರುನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಹೆರಿಗೆ ವಿಭಾಗ ಆರಂಭಿಸಬೇಕು ಹಾಗೂ ಮಹಿಳಾ ತಜ್ಞೆ ವೈದ್ಯರನ್ನು ನೇಮಕ ಮಾಡಬೇಕು ಹಾಗೂ ಮಹಿಳಾ ವೈದ್ಯರು, ಮಕ್ಕಳ ವೈದ್ಯರು ಹಿರಿಯ ಆರೋಗ್ಯ ಸಹಾಯಕರು ಡಿ ಸಿಬ್ಬಂದಿ ಇತ್ಯಾದಿ ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮಿಸಬೇಕು ಎಂದು ಹೇಳಿದರು.

ತಾಲೂಕು ವೈದ್ಯಾದಿಕಾರಿಗಳಾದ ಡಾ.ನಾಗಭೂಷಣರವರ ಮೂಲಕ ರಾಜ್ಯ ಆರೋಗ್ಯ ಸಚಿವರಿಗೆ ಸಾಮೂಹಿಕ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಬಾಲಕೃಷ್ಣ, ವೆಂಕಟೇಶ್ ಕೋಣಿ, ಗಣೇಶ ತೊಂಡೆಮಕ್ಕಿ ನಾಗರತ್ನಾ ನಾಡ ಬೈಂದುರು ವಲಯ ಮುಖಂಡರು ರವರ ಸಹಿತ ಸುಮಾರು 50 ಜನರು ಹಾಜರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)