ಭಿಡೆ ಟ್ರೋಫಿ 2018ರ ಉದ್ಘಾಟನ ಕಾರ್ಯಕ್ರಮ

0
216

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಲ್ಲೂರು : ಭಿಡೆ ಟ್ರೋಫಿ 2018 ರ ಕಾರ್ಯಕ್ರಮವನ್ನು  ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿಗಳಾದ ಬಿ ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಭಿಡೆ ಟ್ರೋಫಿ ಸಂಚಾಲಕರಾದ ಶ್ರೀಯುತ ಎಂ ಗಂಗಾಧರ ಭಿಡೆ ಹಾಗೂ ಧರ್ಮಪತ್ನಿ ಗಾಯತ್ರಿ ಭಿಡೆ ಕೊಲ್ಲೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಪ್ರಥಮ ದರ್ಜೆ ಆರ್ಟ್ಸ್ ವಿಭಾಗದ ಕುಮಾರಿ ಧನ್ಯ ರಾಷ್ಟ್ರ ಮಟ್ಟದ ನೆಟ್ ಬಾಲ್ ಕ್ರೀಡೆಯಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಮತ್ತು ಭಾಗವಹಿಸಿದ ಅಭಿಷೇಕ್ ಮಮತಾ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಉಪಾಧ್ಯಕ್ಷೆ ನೇತ್ರಾವತಿ ಮೂಕಾಂಬಿಕಾ ದೇವಳದ ವ್ಯವಸ್ಥಾಪಕ ಸಮಿತಿ ಸದಸ್ಯ ಕೆ. ರಮೇಶ್ ಗಾಣಿಗಾ ಹಾಗೂ ಭಿಡೆ ಟ್ರೋಫಿ ಅಧ್ಯಕ್ಷ ಚಂದ್ರ ಬಳೆಗಾರ್ ಮತ್ತು ಕಾರ್ಯದರ್ಶಿ ನಾಗೇಶ್ ಬಾಳಿಗ ಕಾರ್ಯದಲ್ಲಿ ಆಶೀರ್ವಚನ ನೀಡಿದ ಗೋಪಾಲ ಕೃಷ್ಣ ಭಟ್ ಹಾಗೂ ಮುಖ್ಯ ಅತಿಥಿಗಳಾಗಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗರಾಜ್ ಭಟ್ ಜಡ್ಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಣನ್ ಸದಸ್ಯ ಸತ್ಯನಾರಾಯಣ ಅಡಿಗ ಹಿರಿಯರಾದ ರಾಧಾಚಂದ್ರ ಘೋಶ್ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗ್ರೀಷ್ಮಾ ಗಿರಿಧರ ಹಾಗೂ ಭಿಡೆ ಕುಟುಂಬದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸತ್ಯನಾರಾಯಣ ರಾವ್ ನಿರೂಪಿಸಿದರು ಚಂದ್ರಬಳೆಗಾರ್ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)