ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಂಬಾರ

0
158

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ.

ಒಟ್ಟು 89 ಮತಗಳಲ್ಲಿ 56 ಮತಗಳು ಕಂಬಾರ ಅವರಿಗೆ ಬಂದಿವೆ. ಕಣದಲ್ಲಿದ್ದ ಮರಾಠಿಯ ಖ್ಯಾತ ಲೇಖಕ ಡಾ. ಬಾಲಚಂದ್ರ ನೆಮದೆ ಅವರಿಗೆ ನಾಲ್ಕು, ಒರಿಯಾದ ಲೇಖಕಿ ಪ್ರತಿಭಾ ರಾಯ್‌ ಅವರಿಗೆ 29 ಮತಗಳು ಸಿಕ್ಕಿವೆ.

ಕಂಬಾರರು 1937 ಜನವರಿ 2ರಂದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದವರು. ಇವರ ಸಮಗ್ರ ಕೃತಿಗೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರೆತಿದ್ದು, ಇದು ಕನ್ನಡ ಭಾಷೆಗೆ ಬಂದ ಎಂಟನೇ ಜ್ಞಾನಪೀಠ ಪ್ರಶಸ್ತಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)