ಪ್ರೇಮಿಗಳ ದಿನದಂದು ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿ

0
156

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಾರವಾರ, ಫೆಬ್ರವರಿ 12 : ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಪ್ರೇಮಿಗಳಿಗೆ ಇದು ಹಬ್ಬದಂತೆ. ಎಲ್ಲೆಲ್ಲೋ ಇರುವ ಪ್ರೇಮಿಗಳು ಎಷ್ಟೇ ಕಷ್ಟ ಆದರೂ ಪರವಾಗಿಲ್ಲ. ಈ ದಿನ ಮಾತ್ರ ಒಟ್ಟಿಗೆ ಇರಬೇಕು. ಒಟ್ಟಿಗೆ ಸಮಯ ಕಳೆಯಬೇಕು ಎಂದು ಕಷ್ಟಪಡುತ್ತಾರೆ.

ಈ ಬಾರಿ ಪ್ರೇಮಿಗಳ ದಿನಕ್ಕೆ ಪ್ರೇಯಸಿ ಜೊತೆ ಎಲ್ಲಿಗೆ ಹೋಗುವುದು? ಎಂದು ಆಲೋಚನೆ ಮಾಡುತ್ತಿದ್ದೀರಾ?. ಎಲ್ಲಿಗೆ ಕರೆದುಕೊಂಡು ಹೋಗಿ ಪ್ರೀತಿಯನ್ನು ನಿವೇದನೆ ಮಾಡೋದು ಅಂತ ಯೋಚನೆ ಮಾಡುತ್ತಿದ್ದರೆ? ನಿಮಗಾಗಿ ಇಲ್ಲೊಂದು ಅವಕಾಶವಿದೆ.

ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ನಿಮಗೊಂದು ಅವಕಾಶ ಕಲ್ಪಿಸಿ ಕೊಡುತ್ತಿದೆ. ಅದು ಕೂಡ ನಿಮ್ಮ ನೆನಪಿನಲ್ಲಿ ಸದಾ ಇರುವಂಥೆ ಮಾಡುವ ಸುವರ್ಣವಕಾಶ ಎನ್ನಬಹುದು.

ಪ್ರಸಿದ್ಧ ಪ್ರವಾಸಿ ತಾಣವಾಗಿರುವವ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿಯ ಸ್ಕೂಬಾ ಡೈವಿಂಗ್ ಪ್ರೇಮಿಗಳಿಗಾಗಿ ಪ್ರೇಮಿಗಳ ದಿನದಂದು ಪ್ರೇಮಿಗಳ ತಾಣವಾಗಿ ರೂಪುಗೊಳ್ಳಲಿದೆ.

ಸ್ಕೂಬಾ ಡೈವಿಂಗ್ ಏಜೆನ್ಸಿ ಪಡೆದಿರುವ ನೇತ್ರಾಣಿ ಅಡ್ವೆಂಚರ್ಸ್‌ ಸಂಸ್ಥೆ ಜೋಡಿಗಳಿಗೆ ಸ್ಕೂಬಾ ಡೈವಿಂಗ್ ಮಾಡಲು ವಿಶೇಷ ರಿಯಾಯಿತಿ ನೀಡುತ್ತಿದೆ. ವಸತಿಯೊಂದಿಗೆ ಕೇವಲ 10 ಸಾವಿರ ರೂ.ಗೆ ಇಬ್ಬರಿಗೂ ಸ್ಕೂಬಾ ಡೈವ್ ಮಾಡಲು ಅವಕಾಶ ನೀಡುತ್ತಿದೆ.

ಮುರುಡೇಶ್ವರದ ಪಾಮ್ ಗ್ರೂವ್ ಹೋಟೆಲ್ ನಲ್ಲಿ ಉಚಿತ ವಸತಿ, ಬಳಿಕ ನೇತ್ರಾಣಿ ದ್ವೀಪಕ್ಕೆ ಇಬ್ಬರನ್ನೂ ಕರೆದೊಯ್ದು ಸ್ಕೂಬಾ ಡೈವ್ ಮಾಡಿಸಲು ಸಂಸ್ಥೆ ಅಣಿಯಾಗಿದೆ.

ಫೆ.9ರಿಂದ ಫೆ.18ರವರೆಗೆ ಮಾತ್ರ ಈ ಅವಕಾಶವಿದೆ. ನಿಮ್ಮ ಪ್ರೇಯಸಿಗೆ ಮರೆಯಲಾಗದ ಈ ಸ್ಕೂಬಾ ಡೈವಿಂಗ್ ಅನುಭವ ನೀಡಲು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)