ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮೆ ವಿತರಣೆ – ಕಾರ್ಮಿಕರು ದುಶ್ಚಟಗಳಿಂದ ದೂರವಿರಿ : ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ

0
251

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ಫೆ 12 ರಂದು ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ಜಿಲ್ಲೆ ಇದರ ಪ್ರಾಯೋಜತ್ವದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಅವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮಾ ವಿತರಣೆ ಕಾರ್ಯಕ್ರಮ ಕಟಪಾಡಿಯಲ್ಲಿ ನಡೆಯಿತು .

   

ಕಾರ್ಯಕ್ರಮ ಉದ್ಘಾಟಿಸಿ ಕಾರ್ಮಿಕರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರು ಮಾತನಾಡಿ ಉಡುಪಿ ಜಿಲ್ಲಾದ್ಯಂತ ಹಲವಾರು ರಾಜಕೀಯ ನಾಯಕರಿಗೆ ಮುಖಂಡರಿಗೆ ಕಾರ್ಮಿಕರ ಸೌಲಭ್ಯದ ಕುರಿತ ಮಾಹಿತಿ ನೀಡಲು ಕಾರ್ಮಿಕರನ್ನು ಸಂಘಟಿಸಿ ಎಂದು ಮನವಿ ಮಾಡಿದ್ದರೂ ಯಾರೂ ಇದರತ್ತ ಗಮನ ಹರಿಸದಿರುವುದು ಬಹಳ ಬೇಸರ ತಂದಿದ್ದು. ಆದರೆ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ ಅವರು ಬಹಳ ಉತ್ತಮವಾಗಿ ಕಾರ್ಮಿಕರನ್ನು ಸಂಘಟಿಸಿದ್ದು ಅಸಂಘಟಿತ ಕಾರ್ಮಿಕರಿಂದ ಯಾವುದೇ ರೀತಿಯ ರಾಜಕೀಯ ಲಾಭವಿಲ್ಲದಿದ್ದರೂ ಅವರನ್ನು ಸಂಘಟಿಸಿ ಅವರಿಗೆ ಬೇಕಾದ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಮುಂಚೂಣಿಯಲ್ಲಿರುವ ಗೀತಾಂಜಲಿ ಸುವರ್ಣ ಅವರನ್ನು ಶ್ಲಾಘಿಸಿದರು .

ಈ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ಕಾರ್ಮಿಕರಿಗೆ ಉಚಿತ ಆರೋಗ್ಯ ವಿಮಾ ಕಾರ್ಡನ್ನು ಹಸ್ತಾಂತರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಕಾರ್ಮಿಕರು ದುಡಿದ ಹಣವನ್ನು ದುಶ್ಚಟಗಳಿಗೆ ಬಳಸದೇ ಉತ್ತಮ ಕೆಲಸಗಳಿಗೆ ಬಳಸಬೇಕು ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿ . ಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವತ್ತ ಹೆಚ್ಚಿನ ಗಮನ ಹರಿಸುವುದಾಗಿ ಇನ್ನೂ ಹೆಚ್ಚಿನ ಜನರಿಗೆ ಈ ಸೌಲಭ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದರು .

ಕರ್ನಾಟಕ ಕಾರ್ಮಿಕರ ವೇದಿಕೆಯ ಕಟಪಾಡಿ ವಲಯ ಅಧ್ಯಕ್ಷರಾದ ಶಿವಪುತ್ರಪ್ಪ . ಮಹಿಳಾ ಅಧ್ಯಕ್ಷೆ ಹಾಗೂ ನೂರಾರು ಜನ ಕಾರ್ಮಿಕರು ಮತ್ತು ಅಲ್ಲಿಯ ನಾಗರಿಕರು ಪಾಲ್ಗೊಂಡಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)