ಶಿರೂರು ಜೆಸಿಐನಿಂದ ವಿನೂತನ ಸ್ವಚ್ಛತಾ ಸ್ವರ್ಧೆ

0
165

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಶಿರೂರು: ಜೆಸಿಐ ಶಿರೂರು “ನಮ್ಮೂರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆ” ಎಂಬ ವಿನೂತನ ಪರಿಕಲ್ಪನೆಯಡಿಯಲ್ಲಿ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಎನ್.ಸಿ..ಸಿ .ನೆವಲ್ ವಿಭಾಗ ,ನಾಡದೋಣಿ ಮೀನುಗಾರರ ಸಂಘ ಅಳ್ವೆಗದ್ದೆ, ಮಹಿಳಾ ಸಂಘ ಅಳ್ವೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ಅಳ್ವೆಗದ್ದೆ ಕಡಲ ತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ‘ನಮ್ಮೂರಿನ ಸ್ವಚ್ಛತೆ ಬಗ್ಗೆ ನಾವೆಲ್ಲರೂ ದೃಢ ಸಂಕಲ್ಪ ಮಾಡಿದ್ದಲ್ಲಿ ಸುಂದರ ಪರಿಸರ ಹಾಗೂ ಅತ್ಯುತ್ತಮ ಆರೋಗ್ಯ ನಮ್ಮದಾಗುತ್ತದೆ. ಅಂತೆಯೇ ಸ್ವರ್ಧಾ ಕಾರ್ಯಕ್ರಮದ ಮೂಲಕ ಇಂತಹ ಸಮಾಜಮುಖಿ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು’ ಎಂದು ಜೆಸಿಐ ಶಿರೂರಿನ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಅದ್ಯಕ್ಷತೆ ವಹಿಸಿ ನುಡಿದರು.

ಕಡಲ ತೀರದಲ್ಲಿ ಬಿದ್ದ ಸುಮಾರು 2 ಕ್ವಿಂಟಾಲ್ 28 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಗ್ರಾಮ ಪಂಚಾಯತನ ಕಸ ವಿಲೇವಾರಿ ವಿಭಾಗಕ್ಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಶಿರೂರು ಇದರ ಉಪಾದ್ಯóಕ್ಷ ನಾಗೇಶ ಟಿ. ,ಬಂದರು ಸಮಿತಿ ಅಧ್ಯಕ್ಷ ನಾರಾಯಣ ಟಿ. ಎನ್.ಸಿ.ಸಿ ಅಧಿಕಾರಿ ಶರದ್ ಗುನಗಿ, ವೆಂಕಟೇಶ ನಾಯ್ಕ, ಜೆಸಿಐ ವಲಯಾಧಿಕಾರಿ ನಾಗರಾಜ ಶೇಟ್, ಪ್ರಸಾದ ಪ್ರಭು, ಹರೀಶ ಶೇಟ್, ಶ್ರೀನಿವಾಸ ಮೊಗೇರ, ನಾಗವೇಣಿ ಮೊಗೇರ, ನಾಗರಾಜ ಅಳ್ವೆಗದ್ದೆ, ಮಾದೇವ ಮೊಗೇರ ಹಾಗೂ ಜೆಸಿಐ ಶಿರೂರಿನ ಸದಸ್ಯರು, ಹಾಗೂ ಇತರ ನಾಗರೀಕರು ಭಾಗವಹಿಸಿದರು.

ಕಾರ್ಯಕ್ಯಮದಲ್ಲಿ ವಿಜೇತರಿಗೆ ಪುಸ್ತಕ ,ಪೆನ್ನು, ಗಿಡವನ್ನು ನೀಡಿ ಪ್ರೋತ್ಸಾಹ ಮಾಡಿದ್ದು ವಿಶೇಷವಾಗಿತ್ತು. ಕಾರ್ಯದರ್ಶಿ ಸುರೇಶ ಮಾಕೋಡಿ ವಂದಿಸಿದರು. ರಾಜು ಪೂಜಾರಿ ಸ್ವಾಗತಿಸಿದರು. ಕೃಷ್ಣ ಪೂಜಾರಿ ನಿರೂಪಣೆ ಮಾಡಿದರು.

ವರದಿ : ಪಾಂಡುರಂಗ ಅಳ್ವೆಗದ್ದೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)