ಶ್ರೀ ಮಹಾಗಣಪತಿ ಸೆಲೆಕ್ಟ್ ಕಲಾತಂಡ ರಿ. ನಾಯ್ಕನಟ್ಟೆ: ಎಸ್‍ಎಂಎಸ್. ಮ್ಯಾರಥಾನ್-2018 ಉದ್ಘಾಟನೆ

0
156

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ, ಫೆ.12: ಶ್ರೀ ಮಹಾಗಣಪತಿ ಸೆಲೆಕ್ಟ್ ಕಲಾತಂಡ ರಿ. ಮಟ್ನಕಟ್ಟೆ ಇದರ 16ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಎಸ್.ಎಂ.ಎಸ್ ಮ್ಯಾರಥಾನ್-2018 ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ರವಿವಾರ ನಾಯ್ಕನಕಟ್ಟೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಉದ್ಯಮಿ ಹೇರಂಜಾಲು ಎಚ್.ವಿಜಯ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಸ್‍ಎಂಎಸ್ ಕಲಾ ತಂಡದ ಸಮಾಜಮುಖಿ ಕಾರ್ಯಕ್ರಮಗಳಿಗೆ ಶುಭಹಾರೈಸಿದರು.

ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ದೇವಾಡಿಗ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭ ಕೆರ್ಗಾಲು ಗ್ರಾ.ಪಂ.ಉಪಾಧ್ಯಕ್ಷ ಸುಂದರ ಕೊಠಾರಿ, ಕೆರ್ಗಾಲು ಗ್ರಾ.ಪಂ. ಮಾಜಿ ಸದಸ್ಯ ವಾಸು ಪೂಜಾರಿ, ನಾಯ್ಕನಕಟ್ಟೆ ಸ.ಹಿ.ಪ್ರಾ.ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ರಾಜು ಪೂಜಾರಿ, ನಾಗರಾಜ ಆರ್.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಸಾಂಸ್ಕøತಿಕ ಕಾರ್ಯದರ್ಶಿ ಸುನೀಲ್ ಕುಮಾರ್ ಕೊಬ್ರಿ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ ಆರ್.ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ದೇವರಾಯ ದೇವಾಡಿಗ ವಂದಿಸಿದರು.

ವರದಿ : ಕೃಷ್ಣ ಬಿಜೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)