ಭಾರತದ ರಕ್ಷಣಾ ಮಾಹಿತಿಯನ್ನು ಪಾಕ್’ನೊಂದಿಗೆ ಹಂಚಿಕೊಂಡ ವಾಯುಸೇನಾ ಅಧಿಕಾರಿ ಬಂಧನ

0
159

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು (ಫೆ.09): ಭಾರತದ ರಕ್ಷಣಾ ಸಂಬಂಧಿ ಗುಪ್ತ ಮಾಹಿತಿಯನ್ನು ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್’ಐ) ಜೊತೆ ಹಂಚಿಕೊಂಡಿರುವ ಆರೋಪದಡಿಯಲ್ಲಿ ವಾಯುಸೇನಾ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕ್ಯಾಪ್ಟನ್ ಅರುಣ್ ಮರ್ವಾಹ ಬಂಧಿತ ಅಧಿಕಾರಿ. ಇವರನ್ನು ವಾಯುಸೇನಾ ಗುಪ್ತಚರ ಇಲಾಖೆ ಅಧಿಕಾರಿಗಳು ಜ. 31 ರಂದು ಬಂಧಿಸಿದ್ದರು. ಫೆ. 07 ರಂದು ದೆಹಲಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು.

ಐಎಸ್’ಐ ಏಜೆಂಟ್’ಗಳಿಂದ ಕ್ಯಾಪ್ಟನ್ ಅರುಣ್ ಮರ್ಮಾಹ ಹನಿ ಟ್ರಾಪ್’ಗೆ ಒಳಗಾಗಿದ್ದರು. ಅವರೊಂದಿಗೆ ದೇಶದ್ರೋಹವಾಗುವಂತಹ ಸಂಭಾಷಣೆಯನ್ನು ಮಾಡಿದ್ದಾರೆ ಎಂದು ಅವರ ಸಾಮಾಜಿಕ ಜಾಲತಾಣಗಳಿಂದ ತಿಳಿದು ಬರುತ್ತದೆ. ಅವರ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಎಫ್’ಐಆರ್’ನ್ನು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)