ಬೈಂದೂರು : ಕುಸಿತಕ್ಕೀಡಾದ ವತ್ತಿನೆಣೆಯಲ್ಲಿ ಸ್ಲೋಪ್ ಪ್ರೋಟೆಕ್ಷನ್ ಮಾದರಿಯ ಕಾಮಗಾರಿ

0
327

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಕಳೆದ ಮಳೆಗಾಲದಲ್ಲಿ ಇಲ್ಲಿನ ವತ್ತಿನೆಣೆ ಗುಡ್ಡ ಕುಸಿತಗೊಂಡು ಹೆದ್ದಾರಿ ಸಂಚಾರ ಆತಂಕ ಸೃಷ್ಟಿಸಿತ್ತು, ಬಳಿಕ ಎಚ್ಚೆತ್ತ ಗುತ್ತಿಗೆದಾರ ಕಂಪೆನಿ ಶಾಶ್ವತ ಪರಿಹಾರಕ್ಕಾಗಿ ಸ್ಲೋಪ್ ಪ್ರೋಟೆಕ್ಷನ್ ಮಾದರಿಯ ಕಾಮಗಾರಿ ಆರಂಭಿಸಲು ಮುಂದಾಗಿದ್ದು, ಅದು ಪ್ರಗತಿಯ ಹಂತದಲ್ಲಿದೆ. ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆ ಎನ್ನುವುದು ಮುಂದಿನ ಮಳೆಗಾಲದವರೆಗೆ ಕಾದು ನೋಡಬೇಕಾಗಿದೆ.

 ಕಾರವಾರ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿಗಾಗಿ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವತ್ತಿನೆಣೆ ಗುಡ್ಡವನ್ನು ಇಬ್ಬಾಗ ಮಾಡುವಾಗ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಕಾಮಗಾರಿ ನಡೆಸುವ ಮುನ್ನ ಇಲ್ಲಿನ ಭೌಗೋಳಿಕ ಪ್ರದೇಶವನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕಾಗಿತ್ತು, ಅಲ್ಲದೇ ಇಲ್ಲಿನ ಮಣ್ಣು ಪರೀಕ್ಷೆ ಮಾಡಿಸಿ ಭೂಗೋಳ ಶಾಸ್ತ್ರಜ್ಞರಿಂದ ಸೂಕ್ತ ಸಲಹೆ ಪಡೆದು ಕಾಮಗಾರಿ ನಡೆಸದೇ ಏಕಾಏಕಿ ಗುಡ್ಡವನ್ನು ನೂರು ಅಡಿಗಳಿಗೂ ಅಕ ಆಳವಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿರುವುದರಿಂದ ಗುಡ್ಡದ ಜೇಡಿಮಣ್ಣು ಹಾಗೂ ಮಳೆಗಾಲದಲ್ಲಿ ಮಳೆಯ ನೀರಿನಿಂದ ಗುಡ್ಡ ಕುಸಿತ ಕಾಣಿಸಿಕೊಂಡಿತ್ತು.

ಇದರಿಂದಾಗಿ ಗುಡ್ಡದ ಬೃಹತ್ ಬಂಡೆ ಹಾಗೂ ಮಣ್ಣು ನೇರವಾಗಿ ಹೆದ್ದಾರಿಗೆ ಅಪ್ಪಳಿಸಿ, ಹೆದ್ದಾರಿ ಸವಾರರಿಗೆ ಆತಂಕ ಸೃಷ್ಟಿಸಿದ್ದಲ್ಲದೆ ಮುನ್ನೆಚ್ಚರಿಕೆಗಾಗಿ ಸುಮಾರು 8 ದಿನಗಳ ಕಾಲ ಗೋವಾ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿತ್ತು. ಜಿಲ್ಲಾಡಳಿತದ ಶೀಘ್ರ ಸ್ಪಂಧನದಿಂದ ಬೈಂದೂರು-ದೊಂಬೆ ಹಾಗೂ ಶಿರೂರು-ಗೋಳಿಬೇರು ಮಾರ್ಗವಾಗಿ ಬದಲಿ ಸಂಚಾರ್ ವ್ಯವಸ್ಥೆ ಕಲ್ಪಿಸಿ, ರಸ್ತೆಯಲ್ಲಿ ಬಿದ್ದಿರುವ ಗುಡ್ಡದ ಮಣ್ಣನ್ನು ತೆರವು ಕಾರ್ಯಾಚರಣೆ ಮಾಡಿ, ವಾರದ ಬಳಿಕ ಹೆದ್ದಾರಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು.

ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಪರಿಶೀಲನೆ ನಡೆಸಿ, ಇಲ್ಲಿನ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಂಬಂತ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಶೀಘ್ರ ಗುಡ್ಡ ಕುಸಿಯದಂತೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆ ಬಳಿಕ ಏಚ್ಚೆತ್ತ ಸಂಬಂತ ಗುತ್ತಿಗೆದಾರ ಕಂಪೆನಿ ಗುಡ್ಡ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಲೋಪ್ ಪ್ರೋಟೆಕ್ಷನ್ ವಾಲ್ ಮಾದರಿಯ ಕಾಮಗಾರಿ ಆರಂಭಿಸಿದೆ.

ಏನಿದು ಸ್ಲೋಪ್ ಪ್ರೋಟೆಕ್ಷನ್ ವಾಲ್?: ಹೆದ್ದಾರಿ ಕಾಮಗಾರಿಗಾಗಿ ಇಬ್ಬಾಗ ಮಾಡಿದ ಗುಡ್ಡದುದ್ದಕ್ಕೂ ಎರಡು ಭಾಗದಲ್ಲಿ ಇಳಿಜಾರಾಗಿ (ಸ್ಲೋಪ್) ಗುಡ್ಡವನ್ನು ಕೊರೆದು, ಅದಕ್ಕೆ ಕಬ್ಬಿಣ ರಾಡ್‍ನ ಮೆಶ್ ಅಳವಡಿಸಿ ಅದರ ಮೇಲೆ ಕಾಂಕ್ರೀಟ್ ಮಾಡುವುದಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ಗುಡ್ಡದಲ್ಲಿ ಇಂಗದೆ, ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತದೆ, ಅಲ್ಲದೆ ಅದಕ್ಕೆ ಹೆದ್ದಾರಿಯ ಇಕ್ಕೆಲದಲ್ಲಿ ಚರಂಡಿ ನಿರ್ಮಿಸಿ, ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಗುತ್ತಿಗೆದಾರ ಕಂಪೆನಿಯ ಅಕಾರಿಗಳು ತಿಳಿಸಿದ್ದಾರೆ.
ಆ ಮೂಲಕ ವತ್ತಿನೆಣೆ ಗುಡ್ಡದ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದೆ, ಮುಂದಿನ ಮಳೆಗಾಲದೊಳಗೆ ಅದು ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಗುತ್ತಿಗೆದಾರ ಕಂಪೆನಿಯ ಅಕಾರಿಗಳು.

ವತ್ತಿನೆಣೆ ಗುಡ್ಡ ಕುಸಿದು, ಭಾರಿ ಆತಂಕ ಸೃಷ್ಟಿಸಿದ ಹೆದ್ದಾರಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಶಾಶ್ವತ ಕಾಮಗಾರಿ ಆರಂಭಿಸಿರುವುದು ಉತ್ತಮ ಬೆಳವಣೆಯಾಗಿದೆ, ಆದರೆ ಇದರ ಗುಣಮಟ್ಟದ ಬಗ್ಗೆ ಅಕಾರಿಗಳು ಹೆಚ್ಚಿನ ಗಮನಹರಿಸಬೇಕು, ಅಲ್ಲದೇ ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಳಿಸಲು ಸಂಬಂತರು ಕ್ರಮ ಕೈಗೊಳ್ಳಬೇಕು – ಆದಿತ್ಯ ಭಟ್ ಹೆದ್ದಾರಿ ಸವಾರ.

ವರದಿ : ರಾಮ ಬಿಜೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)