ಥೈವಾನ್ನಲ್ಲಿ ಪ್ರಬಲ ಭೂಕಂಪ : 214ಕ್ಕೂ ಹೆಚ್ಚು ಜನರಿಗೆ ಗಾಯ

0
227

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೂಲಿಯನ್, ಫೆ.7: ಥೈವಾನ್ನ ಕರಾವಳಿ ನಗರವಾದ ಹೂಲಿಯನ್ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4ರಷ್ಟಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೇ ಪ್ರಕಟಿಸಿದೆ.

ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಬಹಳಷ್ಟು ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಗಳಿವೆ. ಪೂರ್ವ ಕರಾವಳಿಯ ಪ್ರವಾಸಿ ತಾಣದಲ್ಲಿ ವಾಸದ ಕಟ್ಟಡವೊಂದು ಕುಸಿದಿದ್ದು, ಕನಿಷ್ಠ 16 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.

ಹೂಲಿಯನ್ ನಗರದಿಂದ ಈಶಾನ್ಯಕ್ಕೆ 22 ಕಿಲೋ ಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ಕೇವಲ ಒಂದು ಕಿಲೋಮೀಟರ್ ದೂರದಲ್ಲಿತ್ತು ಎಂದು ಯುಎಸ್ಜಿಎಸ್ ಹೇಳಿದೆ. ಹಲವು ಬಾರಿ ಲಘು ಕಂಪನಗಳು ಸಂಭವಿಸಿದ್ದು, ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

214 ಮಂದಿ ಭೂಕಂಪದಲ್ಲಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಹೂಲಿಯನ್ ನಗರದ ಬೀದಿಗಳು ಭೂಕಂಪದಿಂದಾಗಿ ಧ್ವಂಸಗೊಂಡಿವೆ. ಸಮರೋಪಾದಿ ಪರಿಹಾರ ಕಾರ್ಯಾಚರಣೆಗೆ ಅಧ್ಯಕ್ಷ ತ್ಸಾಯಿ ಯಿಂಗ್ ವೆಬ್ ಸೂಚಿಸಿದ್ದಾರೆ.

ಹೂಲಿಯಾನ್ನ ಪ್ರಮುಖ ಹೋಟೆಲ್ ಮಾರ್ಷಲ್ ಬುಡಮೇಲಾಗಿದ್ದು, ಇಬ್ಬರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಇತರ ಎರಡು ಹೋಟೆಲ್ಗಳು ಹಾಗೂ ಮಿಲಿಟರಿ ಆಸ್ಪತ್ರೆ ಕೂಡಾ ಬುಡಮೇಲಾಗಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)