ಬೈಂದೂರು : ಹೋಲಿಕ್ರಾಸ್ ಚರ್ಚಿನ ಸಂಭ್ರಮದ ಕೊಂಪ್ರಿ ಫೆಸ್ತ್

0
235

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಹೋಲಿಕ್ರಾಸ್ ಚರ್ಚಿನ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ನಡೆದ ಕೊಂಪ್ರಿ ಫೆಸ್ತ್ ಭಾನವಾರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಉಡುಪಿ ಉಜ್ವಾಡ್ ಪತ್ರಿಕೆಯ ಸಂಪಾದಕ ರೆ.ಪಾ. ಚೇತನ್‍ರವರು ದಿವ್ಯ ಬಲಿಪೂಜೆ ನೆರವೆರಿಸಿ ಮಾತನಾಡಿದ ಅವರು ಮಾನವನ ದೈನಂದಿನ ಮಾತುಗಳಲ್ಲಿ ಜಗತ್ತಿನ ಮುತ್ತಿನಂಥ ಮಾತುಗಳಾದ, ದಯವಿಟ್ಟು ಕ್ಷಮಿಸು ಮತ್ತು ಧನ್ಯವಾದವೆಂಬ ಚಿಕ್ಕ ಶಬ್ಧಗಳು ಜಗತ್ತಿನಲ್ಲಿ ಶಾಂತಿ ಸಹಬಾಳ್ವೆವೆಂಬ ಪವಾಡವನ್ನೆ ಮಾಡತ್ತದೆ ಎಂದರು.

    

ಈ ಸಂದರ್ಭದಲ್ಲಿ ಚರ್ಚ ವಠಾರದಿಂದ ಯಡ್ತರೆ ಜಂಕ್ಷನ್ ತನಕ ಭವ್ಯ ಪುರಮೆರವಣಿಗೆ ಜರಿಗಿತು.

ದಾನಿಗಳಾದ ಜಯನಂದ ಹೊಬಳಿದಾರ್, ಲಾರೆನ್ಸ್ ಫೆರ್ನಾಂಡಿಸ್ ಯಡ್ತರೆ, ದುರ್ಗಾಂಬಾ ಕ್ರಿಕೆಟ್ ಕ್ಲಬ್ ಮತ್ತು ಬೈಂದೂರು ಠಾಣಾಧಿಕಾರಿ ಬಿ.ಎನ್. ತಿಮ್ಮೇಶ್‍ರವರಿಗೆ ಗೌರವಿಸಲಾಯಿತು.

ವೇದಿಕೆಯಲ್ಲಿ ಬೈಂದೂರು ಧರ್ಮಗುರು ರೆ.ಪಾ. ರೊನಾಲ್ಡ್ ಮಿರಾಂದರವರು ಉಪಸ್ಥಿತರಿದ್ದರು.

ಉಪಧ್ಯಾಕ್ಷ ಸ್ಟಾನಿ ಮಾಸ್ಟರ್ ವಂದಿಸಿದರು.

ವರದಿ : ಲಾರೆನ್ಸ್ ಫೆರ್ನಾಂಡೀಸ್

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)