ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಅಂಡರ ಪಾಸ್ ಕಾಮಗಾರಿ ತಡೆದು ಸಾರ್ವಜನಿಕರಿಂದ ಪ್ರತಿಭಟನೆ

1
774

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (11) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಬೈಂದೂರು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬೈಂದೂರು ಅಂಡರ ಪಾಸ್ ಕಾಮಗಾರಿಯು ಬೈಂದೂರು ಪೊಲೀಸ್ ಠಾಣಾ ಪೊಲೀಸ ಸಾಹಯದಿಂದ ಬೆಳಿಗ್ಗೆಯಿಂದ ಬರದಿಂದ ಸಾಗುತ್ತಿದ್ದು ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು ಕಾಮಗಾರಿ ತಡೆದು ಪ್ರತಿಭಟಿಸಿದ್ದಾರೆ.

ಹಲವು ದಿನಗಳ ಸಾರ್ವಜನಿಕರ ಬೇಡಿಕೆಯಾಗಿದ್ದ ಬೈಂದೂರು ರಾಷ್ಟ್ರೀಯ ಹೆದ್ದಾರಿ ಪ್ಲೈ ಓವರ್ ಕಾಮಗಾರಿ ನಡೆಯದೆ ಅಂಡರ ಪಾಸ ಕಾಮಗಾರಿ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ರೈತ ಸಂಘದ ಮುಂಖಡರಾದ ದೀಪಕ ಕುಮಾರ ಶೆಟ್ಟಿ ನೇತೃತ್ವದಲ್ಲಿ ಕಾಮಗಾರಿ ತಡೆದು ಪ್ರತಿಭಟಿಸಲಾಯಿತು. ನಂತರ ಮಾತನಾಡಿದ ಅವರು ಫೆ. 10 ರಂದು ಬೈಂದೂರಿನ ಕೋಡೆರಿಗೆ ಇಲ್ಲಿನ ಸಂಸದರಾರ ಯಡಿಯೂರಪ್ಪನವರು ಆಗಮಿಸಲಿದ್ದು ಅಂದು ಅವರು ನಿರ್ದಾರಿಸಲಿದ್ದು ಅಲ್ಲಿಯವರೆಗೂ ಕಾಮಗಾರಿ ತಡೆಯಬೇಕಾಗಿ ಆಗ್ರಹಿಸಿದರು. ಇದಕ್ಕೆ ಸ್ಪಂದಿಸದ ಕುಂದಾಪುರ ಹಾಗೂ ಬೈಂದೂರು ತಹಶೀಲ್ದಾರರು ಜಿಲ್ಲಾಧಿಕಾರಿಯ ಆದೇಶದ ನೀರಿಕ್ಷೆಯಲಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರರು, ಬೈಂದೂರು ತಹಶೀಲ್ದಾರ ಕಿರಣ ಬಿ. ಗೌರಯ್ಯ , ಬೈಂದೂರು ವೃತ್ತ ನಿರೀಕ್ಷಕರು ಪರಮೇಶ್ವರ ಗುನಜ ಕುಂದಾಪುರ, ಬೈಂದೂರು ಪೊಲೀಸ ಠಾಣಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (11) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)