ಖಂಬದಕೋಣೆ : ಗ್ರಾಮೀಣ ಪ್ರದೇಶದಲ್ಲಿ ಪಸರಿಸಲಿದೆ ಕನ್ನಡ ಕಂಪು – ಇಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ

0
175
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ, ಜ.12: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ-2018 ಜ.12ರಿಂದ 14ರ ವರೆಗೆ ಖಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.

ಶಿಕ್ಷಣ ತಜ್ಞನ ಡಾ. ಹಟ್ಟಿಯಂಗಡಿ ಶಾಂತರಾಮ ಸಮ್ಮೇಳನದ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಸಕಲ ಸಿದ್ಧತೆಗಳು ಭರದಿಂದ ನಡೆದಿದೆ. ನಾಯ್ಕನಕಟ್ಟೆಯಿಂದ ಖಂಬದಕೋಣೆ ವರೆಗೆ ಹಳದಿ ಕೆಂಪು ಪತಾಕೆಗಳು ಹಾಗೂ ಕನ್ನಡಾಂಭೆಯ ಬಾವುಟಗಳು ರಾ.ಹೆದ್ದಾರಿಯಲ್ಲಿ ರಾರಾಜಿಸುತ್ತಿವೆ. ರಸ್ತೆಯುದ್ಧಕ್ಕೂ ಅಲಲ್ಲಿ ಅಳವಡಿಸಿರುವ ಬ್ಯಾನರ್‍ಗಳು ಕನ್ನಡಾಭಿಮಾನಿಗಳನ್ನು ಸಾಹಿತ್ಯ ಸಮ್ಮೇಳನಕ್ಕೆ ಕೈಬೀಸಿ ಕರೆಯುತ್ತಿವೆ.

ಜ.12ರಂದು ಬೆಳಗ್ಗೆ 9ಗಂಟೆಗೆ ಕೆರ್ಗಾಲು ಗ್ರಾ.ಪ.ಅಧ್ಯಕ್ಷೆ ಸೋಮು ರಾಷ್ಟ್ರಧ್ವಜಾರೋಹಣ, ಖಂಬದಕೋಣೆ ಗ್ರಾ.ಪಂ.ಅಧ್ಯಕ್ಷ ರಾಜೇಶ ದೇವಾಡಿಗ ಕನ್ನಡ ಧ್ವಜಾರೋಹಣ ಹಾಗೂ ನೀಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4ಗಂಟೆ ಕನ್ನಡ ಅಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಪ್ರೋ.ಜಿ.ಸಿದ್ಧರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ನೂತನ ಪ್ರಯೋಗ : ಸಾಹಿತ್ಯ ಸಮ್ಮೇಳವನ್ನು ಸಾಮಾನ್ಯವಾಗಿ ಬೆಳಗ್ಗೆ ಸಮಯದಲ್ಲಿ ಆರಂಭಿಸುವುದು ಸಾಮಾನ್ಯ ಆದರೆ ಸಾಹಿತ್ಯಾಭಿಮಾನಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಸಂಜೆ 3ರಿಂದ ರಾತ್ರಿ 10ಗಂಟೆ ವರೆಗೆ ಆಯೋಜಿಸಿರುವುದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೊಸ ಪ್ರಯೋಗಕ್ಕೆ ಮುನ್ನಡಿ ಬರೆಯಲು ಸಜ್ಜಾಗಿದೆ.

ಭವ್ಯ ಮೆರವಣಿಗೆ : ಕಾರ್ಯಕ್ರಮದ ಉದ್ಘಾಟನೆಯ ಮೊದಲು ಸಂಜೆ 3ಗಂಟೆಗೆ ರಾ.ಹೆದ್ದಾರಿ 66ರಲ್ಲಿ ನಾಯ್ಕನಕಟ್ಟೆ ದೇವಸ್ಥಾನದಿಂದ ಖಂಬದಕೋಣೆ ಸ.ಪ.ಪೂ ಕಾಲೇಜಿನ ವರೆಗೆ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ನಿವೃತ್ತ ಶಿಕ್ಷಕ ಎನ್. ರಮಾನಂದ ಭಟ್ ಮೆರವಣಿಗೆ ಉದ್ಘಾಟಿಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕನ್ನಡದ ಕಂಪು : ಖಂಬದಕೋಣೆ ಕಾಲೇಜು ಪರಿಸದರಲ್ಲಿ ಇನ್ನು ಮೂರು ದಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಕುರಿತು ವಿಚಾರಗೋಷ್ಠಿ, ಶತಮಾನದ ಯಕ್ಷರಾಜ ಹಾರಾಡಿ ಕುಷ್ಠ ಗಾಣಿಗರ ಕುರಿತು ವಿಶೇಷ ಉಪನ್ಯಾಸ, ಹಿರಿಯ ಸಾಹಿತಿ ಪ್ರೋ.ಬಿ.ಎಚ್.ಶ್ರೀಧರ ಅವರ ಬದುಕು ಬರಹಗಳ ಕುರಿತು ವಿಚಾರ ಮಂಡನೆ, ಕರಾವಳಿ ಜಿಲ್ಲೆಯ ತಲ್ಲಣಗಳು ವಿಷಯದ ವಿಚಾರಗೋಷ್ಠಿ, ಕವಿಗೋಷ್ಠಿಯಲ್ಲಿ ಜಿಲ್ಲೆಯ 15 ಕವಿಗಳು ಕವಿತಾ ವಾಚನ, ಸಮ್ಮೇಳನಾಧ್‍ಯಕ್ಷರೊಂದಿಗೆ ಸಂವಾದ, ಮೂರೂ ದಿನಗಳಲ್ಲಿ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು, ನಾಟಕ ಚಲನಚಿತ್ರ ಪ್ರದರ್ಶನ ನಡೆಯುವುದರಿಂದ ಕನ್ನಡದ ಸುವಾಸನೆ ಗ್ರಾಮೀಣ ಭಾಗದ ಜನತೆಗೆ ಸಿಗಲಿದೆ.

14ರಂದು ಸಮಾರೋಪ ಸಮಾರಂಭ : ಜ.14ರಂದು ಸಂಜೆ 4.45ಕ್ಕೆ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕೆ. ಎಸ್.ಪ್ರಕಾಶ ರಾವ್, ಗುರುಪ್ರಸಾದ್ ಸುಧಾಕರ ಶೆಟ್ಟಿ, ಎನ್. ಗುರುರಾಜ್, ಗುರುವ ಕೊರಗ, ಚಂದ್ರಕರ ಕಾಮತ್, ಮ.ನ. ಹೆಬ್ಬಾರ್, ತಲ್ಲೂರು ಶಿವರಾಮ ಶೆಟ್ಟಿ, ಯು.ಎನ್.ಶೆಣೈ, ಸುಹೇಲ್ ಭಾಷಾ ಸಾಹೇಬ್, ಚಂದ್ರನಾಥ ಬಜಗೋಳಿ, ವೆಂಕಟೇಶ ಪೈ, ಮಂಜುನಾಥ ಮಧ್ಯಸ್ಥ, ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ವಾಗ್ಜ್ಯೋತಿ ಶ್ರವಣ ದೋಷವುಳ್ಳವರ ಮಕ್ಕಳ ಶಾಲೆ ವಸತಿ ಶಾಲೆ, ಮೂಡುಬಗೆ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಉದ್ಯಮಿ ಆನಂದ ಸಿ.ಕುಂದರ್ ಸಮ್ಮಾನ ನಡೆಸಿಕೊಡಲಿದ್ದಾರೆ. ಹಿರಿಯ ಸಾಹಿತಿ ಪತ್ರಕರ್ತ ಎ.ಈಶ್ವರಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ.

ವರದಿ : ಕೃಷ್ಣ ಬಿಜೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)