ಆರ್ ಎಸ್ ಎಸ್, ಬಿಜೆಪಿ ಉಗ್ರರು ಎಂಬ ಹೇಳಿಕೆ- ಬಿಜೆಪಿ ಯಿಂದ ಜೈಲ್ ಭರೋ

0
140
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಂಗಳೂರು: ಆರ್ ಎಸ್ ಎಸ್ ಬಿಜೆಪಿ ಉಗ್ರ ರು ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಭಯೋತ್ಪಾದಕರು ಯಾರು? ಸಿದ್ದರಾಮಯ್ಯನವರೆ ಉತ್ತರಿಸಿ ಎಂಬ ಪೋಸ್ಟರ್ ನೊಂದಿಗೆ ಪ್ರತಿಭಟನೆ ನಡೆಸಿದರು.

ಸಿ ಎಂ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ ಕಾರ್ಯಕರ್ತರು ಅವರಿಗೆ ಹುಚ್ಚು ಹಿಡಿಯುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಜಪೇಯಿ, ಅಡ್ವಾನಿ, ಪ್ರಧಾನಿ ಮೋದಿಯಂತಹ ನಾಯಕರು ಬಿಜೆಪಿಯಿಂದ ಬಂದಿದ್ದು ಎಂದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಮಲಗಿ ಪ್ರತಿಭಟಿಸುತ್ತಿದ್ದಾಗ ಬಿಜೆಪಿ ಮುಖಂಡರನ್ನು ಕೈಕಾಲು ಹಿಡಿದು ಹೊತ್ತೊಯ್ದು ಬಂಧಿಸಿದ್ದಾರೆ.

ಡೌನ್ ಡೌನ್ ಸಿದ್ದರಾಮಯ್ಯ, ಡೌನ್ ಡೌನ್ ಕಾಂಗ್ರೆಸ್, ಕಿಕ್ ಔಟ್ ಕಾಂಗ್ರೆಸ್ ಎಂದು ಘೋಷಣೆ ಪ್ರತಿಭಟನೆಯಲ್ಲಿ ಕೇಳಿಬಂದಿದ್ದು ಯೋಗೀಶ್ ಭಟ್, ವೇದವ್ಯಾಸ ಕಾಮತ್, ರೂಪ ಡಿ ಬಂಗೇರ, ಸಂಜಯ್ ಪ್ರಭು, ಬ್ರಿಜೆಶ್ ಚೌಟ, ಸತ್ಯಜಿತ್ ಸುರತ್ಕಲ್ ಮೊದಲಾದ ನಾಯಕರನ್ನು ಬಂಧಿಸಿದರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)