ಬಲವಂತದ ಮತಾಂತರ, ಸೆಕ್ಸ್ ದಾಸ್ಯ ಜಾಲ ಬಯಲು

0
175
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ತಿರುವನಂತಪುರಂ, ಜನವರಿ 12: ಬಲವಂತವಾಗಿ ಮತಾಂತರ ಮಾಡುವ ಮೂಲಕದ ಧರ್ಮದ ಹೆಸರಿನಲ್ಲಿ ಅಮಾಯಕ ಮುಸ್ಲಿಮರನ್ನು ಸೆಕ್ಸ್ ದಾಸ್ಯದ ಬಲೆಗೆ ಬೀಳಿಸುವ ಜಾಲವನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಫಯಾಜ್ ಹಾಗ್ ಸಿಯಾದ್ ಎಂಬ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೇರಳ ಪೊಲೀಸರಿಗೆ ಈ ಆಘಾತಕಾರಿ ಬೆಳವಣಿಗೆ ಕಂಡು ಬಂದಿದೆ. ಅನ್ಯಕೋಮಿನ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದ್ದು, ಅವರನ್ನು ಸಿರಿಯಾಕ್ಕೆ ಕಳುಹಿಸಿ ಸೆಕ್ಸ್ ದಾಸ್ಯಕ್ಕೆ ದೂಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಜಾಲದ ಮುಖ್ಯ ಆರೋಪಿ ಮೊಹಮ್ಮದ್ ರಿಯಾಜ್ (26) ನಾಪತ್ತೆಯಾಗಿದ್ದಾನೆ. ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ನಂಬಿಸಿ, ಇಸ್ಲಾಮಿಗೆ ಮತಾಂತರ ಮಾಡಿ, ಸಿರಿಯಾಕ್ಕೆ ಕಳುಹಿಸುವ ಜಾಲವನ್ನು ಈ ಮೂವರು ನೋಡಿಕೊಳ್ಳುತ್ತಿದ್ದಾರೆ.

ಕಣ್ಣೂರಿನ ನಿವಾಸಿಯಾಗಿರುವ ರಿಯಾಜ್ 2015ರಲ್ಲಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ಯುವತಿಯ ಸ್ನೇಹ ಬೆಳೆಸಿಕೊಂಡು, ನಂಬಿಸಿ ಆಕೆಯನ್ನು ದೈಹಿಕವಾಗಿ ಅನುಭವಿಸಿದ್ದ. ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬೆದರಿಕೆ ಹಾಕಿದ್ದ . ನಂತರ ಆಕೆಯ ಒತ್ತಡಕ್ಕೆ ಮಣಿಸಿ 2016ರನಲ್ಲಿ ಮತಾಂತರಗೊಳಿಸಿ ಮದುವೆಯಾಗಿದ್ದ. ಬೆಂಗಳೂರಿನ ಹೆಬ್ಬಾಳದಲ್ಲಿ ಮದುವೆ ನೋಂದಣಿ ಮಾಡಿಸಿದ್ದ.

ಆದರೆ, ಈತ ಮಹಿಳೆಯರ ಮಾರಾಟ ಜಾಲದಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿದ್ದರಿಂದ ನವೆಂಬರ್ 2017ರಲ್ಲಿ ಗುಜರಾತ್ ಮೂಲದ ಕೇರಳದ ಪಥನಮಿತ್ತ ಊರಿನ ಈ ಯುವತಿ ಕೋರ್ಟ್ ಮೆಟ್ಟಿಲೇರಿದ್ದಳು. ರಿಯಾಜ್ ಜತೆಗಿನ ಮದುವೆ ಅಸಿಂಧುಗೊಳಿಸಲು ಕೋರಿದ್ದಳು.

ಐಸಿಸ್ ಉಗ್ರರ ಜತೆ ರಿಯಾಜ್ ಹಾಗೂ ಸಹಚರರ ನಂಟು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದರಿಮ್ದ ಎರ್ನಾಕುಲಂನ ಎಸ್ ಪಿ ಎವಿ ಜಾರ್ ತಂಡ, ತನಿಖೆ ಚುರುಕುಗೊಳಿಸಿತು. ಸದ್ಯ ರಿಯಾಜ್ ಹುಡುಕಾಟ ಜಾರಿಯಲ್ಲಿದ್ದು, ಜೆಡ್ಡಾದಲ್ಲಿರುವ ಶಂಕೆ ವ್ಯಕ್ತವಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)