ಶ್ರೀಮದ್ ಭಗವದ್ಗೀತಾ ಸಪ್ತಾಹ ಕಾರ್ಯಕ್ರಮ

0
141
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಪ್ರತಿ ಮಂಗಳವಾರ ನಡೆಯುತ್ತಿರುವ ಸ್ತೋತ್ರ ಪಠಣದ ಹತ್ತು ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ ಶ್ರೀಮದ್ ಭಗವದ್ಗೀತಾ ಸಪ್ತಾಹ ಕಾರ್ಯಕ್ರಮ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಮಾಪನಗೊಂಡಿತು.

ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದ್ವಿತೀಯ ಪುಣ್ಯತಿಥಿ ಆಚರಣೆ ಅಂಗವಾಗಿ ಶ್ರೀಗಳ ಗುಣಗಾನ ನಡೆಸಲಾಯಿತು. ಏಳು ದಿನಗಳ ಪರ್ಯಂತ ನಡೆದ ಶ್ರೀಮದ್ ಭಗವದ್ಗೀತಾ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮದ್ ಭಗವದ್ಗೀತೆಯ 18 ಅಧ್ಯಾಯದ ಪಠಣ, ಶ್ರೀ ವಿಷ್ಣು ಸಹಸ್ರನಾಮ ಪಠಣ, ಶ್ರೀ ರಾಮರಕ್ಷಾ ಸ್ತೋತ್ರ, ಶ್ರೀ ನರಸಿಂಹ ಸ್ತುತಿ, ಶ್ರೀದೇವರ ಅಷ್ಟಕ ಸಹಿತ ಅನೇಕ ಸ್ತೋತ್ರಗಳ ಪಠಣ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀದೇವರಿಗೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.

ವರದಿ : ನರಸಿಂಹ ನಾಯಕ್ ಉಪ್ಪುಂದ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)