ಓಂಕಾರ ಸ್ವರೂಪಿಯಾದ ಭಗವಂತನ ಸ್ಮರಣೆಯಿಂದ ಜೀವನ ಪಾವನವಾಗುತ್ತದೆ – ಮಂಗೇಶ ಶೆಣೈ ಯಳಜಿತ್

0
135
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ : ಓಂಕಾರ ಸ್ವರೂಪಿಯಾದ ಭಗವಂತನ ಸ್ಮರಣೆಯಿಂದ ಜೀವನ ಪಾವನವಾಗುತ್ತದೆ. ಆಧ್ಯಾತ್ಮ ಪರಿಕಲ್ಪನೆಯಿಂದ ಜೀವನ ಸಾಕ್ಷಾತ್ಕಾರವಾಗುತ್ತದೆ. ಭಗವದ್ಗೀತೆಯನ್ನು ಓದುವುದರಿಂದ ಅದನ್ನು ಅರ್ಥೈಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಾರ್ಥಕ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂದು ಆಧ್ಯಾತ್ಮಿಕ ಚಿಂತಕ ಹೇಳಿದರು.

ಅವರು ಗಂಗೊಳ್ಳಿಯ ನಿನಾದ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ನೆನಪಿಗಾಗಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಜ್ಞಾನುಸಾರ ಮಕ್ಕಳಿಗಾಗಿ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಜ್ಞಾನಗಂಗಾ-2 ಕಾರ್ಯಕ್ರಮದಲ್ಲಿ ಶ್ರೀಮದ್ ಭಗವದ್ಗೀಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಇದೇ ಸಂದರ್ಭ ಶ್ರೀಮದ್ ಭಗವದ್ಗೀತೆಯ 9ನೇ ಅಧ್ಯಾಯ ರಾಜವಿದ್ಯಾ ರಾಜಗುಹ್ಯ ಯೋಗ ಪಠಣವು ನಡೆಯಿತು. ಎಸ್.ವೈದೇಹಿ ಆಚಾರ್ಯ, ಎಂ.ಪ್ರಜ್ಚಲ್ ಪೈ, ಬಿ.ರಕ್ಷಾ ಶೆಣೈ, ಪಂಚಮಿ ಕಿಣಿ ಮತ್ತು ಅನುಶ್ರೀ ಕಿಣಿ ಭಗವದ್ಗೀತೆಯ ಶ್ಲೋಕವನ್ನು ಪಠಿಸಿದರು. ನಿನಾದ ಸಂಸ್ಥೆಯ ಮತ್ತು ಜ್ಞಾನಗಂಗಾ ಕಾರ್ಯಕ್ರಮದ ಸದಸ್ಯರು ಉಪಸ್ಥಿತರಿದ್ದರು.

ವರದಿ : ನರಸಿಂಹ ನಾಯಕ್ ಉಪ್ಪುಂದ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)