ಭಯೋತ್ಪಾದಕರು ಹುತಾತ್ಮರಂತೆ, ಅವರ ಸಾವನ್ನು ಸಂಭ್ರಮಿಸಬಾರದಂತೆ!

0
169
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜಮ್ಮು, ಜನವರಿ 11: ಕಾಶ್ಮೀರದ ಭಯೋತ್ಪಾದಕರು ಸತ್ತರೆ ಅಂಥವರನ್ನು ಹುತಾತ್ಮರು ಎಂದು ಕರೆಯಬೇಕು, ಅವರ ಸಾವನ್ನು ಎಂದಿಗೂ ಸಂಭ್ರಮಿಸಬಾರದು’ ಎನ್ನುವ ಮೂಲಕ ಪಿಡಿಪಿ (ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ) ಮುಖ್ಯಸ್ಥ ಐಜೀಜ್ ಅಹ್ಮದ್ ಮಿರ್ ಎಂಬುವವರು ವಿವಾದಕ್ಕೆ ನಾಂದಿಹಾಡಿದ್ದಾರೆ.

ಕಾಶ್ಮೀರದಲ್ಲಿರುವ ಭಯೋತ್ಪಾದಕರೆಲ್ಲ ನಮ್ಮ ಸಹೋದರರು. ಅವರಲ್ಲಿ ಹಲವರು ಇನ್ನೂ ಅಪ್ರಾಪ್ತರು. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ಅಂಥವರ ಬಗ್ಗೆ ನಮ್ಮಲ್ಲಿ ಅನುಕಂಪವಿರಬೇಕೇ ಹೊರತು ಅಂಥವರ ಸಾವನ್ನು ನಾವು ಸಂಭ್ರಮಿಸಬಾರದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ವಾಚಿ ಕ್ಷೇತ್ರವನ್ನು ಪ್ರತಿನಿಧಿಸುವ ಇವರು, ‘ಕಾಶ್ಮೀರದ ಸಮಸ್ಯೆ ಒಂದು ರಾಜಕೀಯ ವಿಚಾರ. ಅದನ್ನು ರಾಜಕೀಯವಾಗಿಯೇ ಬಗೆಹರಿಸಬೇಕು’ ಎಂದಿದ್ದಾರೆ.

ಆದರೆ ಭಯೋತ್ಪಾದಕ ದಾಳಿಗಳ ಮೂಲಕ ಹಲವು ಅಮಾಯಕರ ಸಾವಿಗೆ ಕಾರಣರಾದ, ದೇಶದಲ್ಲಿ ಅಶಾಂತಿ ಬಿತ್ತುತ್ತಿರುವ ಭಯೋತ್ಪಾದಕರನ್ನು ಹುತಾತ್ಮರು ಎಂದು ಕರೆಯುವುದು ಸೈನಿಕರಿಗೆ ಮಾಡಿದ ಅವಮಾನವಲ್ಲವೇ? ಎಂಬುದು ಹಲವರ ಪ್ರಶ್ನೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)