ಧನ್ಯಶ್ರೀ ಆತ್ಮಹತ್ಯೆ: ಪ್ರಮುಖ ಆರೋಪಿ ಸಂತೋಷ್ ಸೆರೆ

0
648

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಚಿಕ್ಕಮಗಳೂರು: ಮೂಡಿಗೆರೆ ಡಿಎಸ್ ಬಿಜಿ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಪ್ರಮುಖ ಆರೋಪಿ ಸಂತೋಷ್ ಬಿನ್‌ ರಾಜೇಶ್ (20)ನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಬಡಗ ಕಜೆಕಾರ್‌ನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ರಾಕೇಶ್ ಕೆಲಸ ಮಾಡುತ್ತಿದ್ದ. ಮೂಡಿಗೆರೆ ಪಿಎಸ್‌ಐ ರಫೀಕ್ ಮತ್ತು ಸಿಬ್ಬಂದಿ ಈತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಹಿಂದೂ ಸಂಘಟನೆಗಳ ಇಂತಹ ಬೆದರಿಕೆಯಿಂದಾಗಿ ಧನ್ಯಶ್ರೀ ನೊಂದು ಆತ್ಮಹತ್ಯೆಗೆ ಶರಣಾಗಿರುವುದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ದೃಢಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಅನಿಲ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳು ಯುವಕ ಮತ್ತು ಯುವತಿಯ ಫೋಟೊ, ವಾಟ್ಸಾಪ್‌ನಲ್ಲಿ ಮಾಡಿದ್ದ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಲ್ಲದೆ ಆಕೆಯ ಮನೆಗೆ ಹೋಗಿ ಯುವತಿ ಧನ್ಯಶ್ರೀ ಮತ್ತು ಆಕೆಯ ತಾಯಿಗೆ ಧಮ್ಕಿ ಹಾಕಿದ್ದರು. ಇದರಿಂದ ಮನನೊಂದ ಧನ್ಯಶ್ರೀ ಇದೆಲ್ಲವನ್ನು ಡೆತ್‌ನೋಟ್‌ ಬರೆದಿಟ್ಟು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಧನ್ಯಶ್ರೀ ಆತ್ಮಹತ್ಯೆ : ಶೋಭಾ ಮೌನ ತಾಳಿದ್ದೇಕೆ?

ಚಿಕ್ಕಮಗಳೂರು ಯುವತಿ ಆತ್ಮಹತ್ಯೆಗೆ ಟ್ವಿಸ್ಟ್: ಹಿಂದೂಪರ ಸಂಘಟನೆಗಳ ಧಮ್ಕಿಗೆ ನೊಂದು ಸುಸೈಡ್

ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿ-ನೇಣು ಬಿಗಿದುಕೊಂಡು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)