ಕುಂದಾಪುರ: ನೀವೇಶನ ರಹಿತ ಕೃಷಿ ಕೂಲಿಯವರ ಮನೆಗಳನ್ನು ಜೆಸಿಬಿಗಳ ಮೂಲಕ ತೆರವು. ಹಲವರ ಬಂಧನ. ಸ್ಥಳದಲ್ಲಿ ಉದ್ವಿಗ್ನತೆ – ದಲಿತ ಸಂಘಟನೆಗಳ ಭಾರೀ ಆಕ್ರೋಶ

0
1028

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ  ಮೂಡ್ಲುಕಟ್ಟೆ ಸಮೀಪ ಸಟ್ವಾಡಿ ಎಂಬಲ್ಲಿ, ಸುಮಾರು 150 ಕ್ಕೂ ನೀವೇಶನ ರಹಿತರು  ಕಟ್ಟಿಕೊಂಡಿದ್ದ  ಜೋಪಡಿ ಮನೆಗಳನ್ನ  ಕಂದಾಯ  ಇಲಾಖಾ ಅಧಿಕಾರಿಗಳು ಜೆ ಸಿ ಬಿ ಮೂಲಕ ತರವುಗೊಳಿಸಿರುವ ಘಟನೆ ಇಂದು ನಡೆದಿದೆ.

ಸುಮಾರು 24 ಎಕ್ರೆ   ಭೂಮಿಯಲ್ಲಿ, ಭೂಮಿ ನಮ್ಮ ಹಕ್ಕು ಎನ್ನುವ ದಲಿತ ಸಂಘಟನೆಗಳ  ದ್ಯೇಯ ಘೋಷಗಳೊಂದಿಗೆ  82 ದಲಿತ ಕುಟುಂಬಗಳು ಸೇರಿದಂತೆ  ಸುಮಾರು ಒಟ್ಟು 152 ನಿವೇಶನ ರಹಿತ ಜನರು  ಜೋಪಡಿ ಮನೆಯನ್ನು  ಕಟ್ಟಿ ಬದುಕು ಸಾಗಿಸುತ್ತಿದ್ದರು, ಸರಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆಗಳನ್ನ ಕಟ್ಟಿದ್ದೀರಿ ಅಂತಾ ಸುಮಾರು 43 ಜೆಸಿಬಿಗಳ ಮೂಲಕ ಬಂದ ಕುಂದಾಪುರ ತಶೀಲ್ದಾರ್ ಜೋಪಡಿ  ಮನೆಯಲ್ಲಿದ್ದವರನ್ನ ಪೊಲೀಸರ ಸಹಾಯದಿಂದ ಬಲವಂತವಾಗಿ  ಹೊರ ಹಾಕಿ  ಎಲ್ಲಾ ಜೋಪಡಿಗಳನ್ನ ತೆರವುಗೊಳಿಸಿದರು.

ಕೃಷಿ ಹಾಗೂ ಕೂಲಿ ಕೆಲವನ್ನೇ ನಂಬಿ ಬದುಕು ಸಾಗುತ್ತಿದ್ದ ಜನ ತಮ್ಮ ಸೂರುಗಳನ್ನ ಉಳಿಸಿಕೊಳ್ಳಲು ಸಾಕಾಷ್ಟು ಪ್ರತಿರೋಧಗಳನ್ನು ತೋರಿಸಿದ್ದರು ಕೂಡ  ಕಂದಾಯ ಅಧಿಕಾರಿಗಳು ಮನಸ್ಸು ಕರಗದೆ ಎಲ್ಲವನ್ನು ತೆರವುಗೊಳಿಸಿದ್ದಾರೆ. ಈ ಹೊತ್ತಿನಲ್ಲಿ ಎರಡು ಮೂರು ಜೋಪಡಿಗಳಿಗೆ ಬೆಂಕಿ ತಗಲಿದ ಕಾರಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು . ಜೋಪಡಿಗಳನ್ನು ತೆರವುಗೊಳಿಸದೇ ತಮಗೆ ಬದುಕಲು ಬಿಡಿ ಅಂತಾ ಅಲ್ಲಿದ್ದ ಮಹಿಳೆಯರು ಸಾಕಾಷ್ಟು ವಿನಂತಿಗಳನ್ನು ಮಾಡಿಕೊಂಡಿದ್ದಾರೆ. ಜೊಪಡಿಗಳನ್ನ ಕಡೆಡುವುತ್ತಿದ್ದ ಸಂಧರ್ಭ ಮಹಿಳೆಯರ ಅಕ್ರಂದನ ಮುಗಿಲು ಮುಟ್ಟಿತ್ತು. ಸುಮಾರು 200 ಕ್ಕ್ಕೂ ಹೆಚ್ಚು ಪೊಲೀಸ್ ಸಿಬಂದಿಗಳ ಜೊತೆಯಲ್ಲಿ ಕುಂದಾಪುರ ತಶೀಲ್ದಾರ್ ತನ್ನ ಜಿ ಎಂ ಬೊರ್ಕರ್ ತರವು  ಕಾರ್ಯಚರಣೆ ನಡೆಸಿದ್ದಾರೆ.

ಈ ಸಂಧರ್ಭ ಕಾರ್ಯಚರಣೆಗೆ ಅಡ್ಡಿ ಪಡಿಸಿದ ಆರೋಪದಲ್ಲಿ ಸುಮಾರು 8 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ನಿವೇಶನ ರಹಿತ ಜನರನ್ನ ಕಂದಾಯ ಇಲಾಖೆ ಬಲವಂತವಾಗಿ ತೆರವುಗೊಳಿಸಿರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಮೌನವಹಿಸಿರುವುದಕ್ಕೆ ದಲಿತ ಸಂಘಟನೆಗಳು ಭಾರೀ ಆಕ್ರೋಷ ವ್ಯಕ್ತ  ಪಡಿಸಿದೆ.

ಪೊಲೀಸರಿಗೆ ಪ್ರತಿರೋಧವೊಡ್ಡಿದ ಕೃಷಿಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ ಸೇರಿದಂತೆ ಎಂಟು ಮಂದಿ ನಿವೇಶನ ರಹಿತರನ್ನು ಬಂಧಿಸಿದ್ದು, ಹೋರಾಟಗಾರರನ್ನು ಕಂಡ್ಲೂರು ಠಾಣೆಯಲ್ಲಿರಿಸಲಾಗಿದೆ.

ಕುಂದಾಪುರ ತಾಲೂಕಿನ ಕಂದಾವರ ಗ್ರಾಮದಲ್ಲಿ ಹಲವು ನಿವೇಶನ ರಹಿತರು 24 ಎಕರೆ 61 ಸೆಂಟ್ಸ್ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು.

ಈಗಾಗಲೇ 10 ಎಕರೆಗಿಂತ ಜಾಸ್ತಿ ಜಮೀನು ಹೊಂದಿರುವ ಕೆಲವು ಶ್ರೀಮಂತರಿಗೆ ಕುಮ್ಕಿ ಹಕ್ಕಿನ ನೆಪದಲ್ಲಿ ಇನ್ನೂ 3 ಎಕರೆಗಿಂತ ಹೆಚ್ಚಿನ ಜಮೀನು ನೀಡಲಾಗಿದೆ. ಆದರೆ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ 152 ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.

ಮನೆಗಳನ್ನು ಹಾಳುಮಾಡಿದ್ದು ಅಕ್ಷಮ್ಯ: ಆಕ್ರೋಶ
94ಸಿ 94ಸಿಸಿ ಅಡಿಯಲ್ಲಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡುವ ಘೋಷಣೆ ಮಾಡಿದ ಸರಕಾರ ಈ ಕುಟುಂಬಗಳಿಗೆ ಅನ್ಯಾಯ ಮಾಡಿದೆ.

ಅದೂ ಕೂಡ ಮುಖ್ಯ ಮಂತ್ರಿಗಳು ಬಂದು ಹೋದ ಮರುದಿನ ಬೆಳಿಗ್ಗಿನ ಜಾವ 5ಗಂಟೆಗೆ ಪೊಲೀಸ್ ಬಲದೊಂದಿಗೆ ಕೂಲಿಕಾರರ ಮುಖಂಡರನ್ನು ಬಂಧಿಸಿ ಜೆಸಿಬಿ ಯಂತ್ರದ ಸಹಾಯದಿಂದ ಮನೆಗಳನ್ನು ಕೆಡವಿ ಬಡವರು ಸಾಲ ಮಾಡಿ ನಿರ್ಮಿಸಿದ ಮನೆಗಳನ್ನು ಹಾಳುಮಾಡಿದ್ದು ಅಕ್ಷಮ್ಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)