ಯುವ ಬ್ರಿಗೇಡ್ ಕಾರ್ಯಕರ್ತರಿಂದ ಕೊಸಳ್ಳಿ ಜಲಪಾತದ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತಾ ಕಾರ್ಯಕ್ರಮ

0
227
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಯುವ ಬ್ರಿಗೇಡ್ ಕುಂದಾಪುರ ಕಾರ್ಯಕರ್ತರ ವತಿಯಿಂದ ಕೊಸಳ್ಳಿ ಜಲಪಾತದ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

   

ಇಂತ ಸುಂದರವಾದ ಜಲಪಾತ ಜೋಗದಷ್ಟೇ ಅದ್ಬುತವಾಗಿದೆ ಆದರೂ ಇದನ್ನ ಉತ್ತಮ ಪ್ರವಾಸಿ ತಾಣವಾಗಿಸಲು ಮತ್ತು ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸದಿರುವುದು ಇಲ್ಲಿನ ನಾಯಕರೆನಿಸಿ ಕೊಂಡವರ ದೌರ್ಬಲ್ಯ ಎದ್ದು ಕಾಣುತ್ತದೆ ಮುಂದೆ ಯಾರೇ ಶಾಸಕರಾಗಲಿ ಯಾವುದೇ ಸರ್ಕಾರ ಬರಲಿ ಈ ಜಲಪಾತವನ್ನ ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳ ಬೇಕು ಎಂದು ನನ್ನ ಕನಸಿನ ಕುಂದಾಪುರದ ಕುರಿತಾಗಿ ಯುವಾ ಬ್ರಿಗೇಡನ್ ಪ್ರಮುಖರಾದ ನಿರಂಜನ ತಲ್ಲೂರು ಹೇಳಿದರು.

ಅದರಂತೆ ಸ್ವಚ್ಚತೆ ಕಾರ್ಯದಲ್ಲಿ ತೊಡಗಿದ್ದವರಿಗೆ ಸಮಯ ಹಸಿವಿನ ಪರಿವೆಯೂ ಇರಲಿಲ್ಲ. ಸತತ ಪರಿಶ್ರಮದಿಂದ ಸಂಜೆಯ ತನಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಕನಸಿನ ಕರ್ನಾಟಕದ ನಿರ್ಮಾಣದಲ್ಲಿ ನಿಸರ್ಗದತ್ತವಾಗಿ ದೊರೆತ ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದಾಗಿ ಅಭಿವೃದ್ದಿ ಹೊಂದುವ ಕನಸನ್ನು ನಾವೆಲ್ಲರೂ ಕಾಣಬೇಕಿದೆ.ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ಜಲಪಾತವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡರೆ ಇದೊಂದು ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂಶಯವಿಲ್ಲ.

ಇದರಿಂದ ಸ್ಥಳೀಯವಾಗಿ ಒಂದಷ್ಟು ಉದ್ಯೋಗ ಸೃಷ್ಟಿಯೂ ಆಗಬಲ್ಲುದು. ಎಲ್ಲೋ ದೂರದ ದೇಶದಲ್ಲಿ ಸಾವಿರಗಟ್ಟಲೆ ಕೊಟ್ಟು ಕೃತಕ ಜಲಪಾತ ನೋಡುವವರಿಗೆ ಪ್ರಕೃತಿದತ್ತವಾಗಿ ಹರಿಯುವ ನೀರಿನ  ಸೆಳೆತಕ್ಕಾಗಿ ಒಂದಷ್ಟು ಪ್ರವೇಶ ಶುಲ್ಕ ವಿಧಿಸಿದರೆ ಸರಕಾರವೂ ಲಾಭ ಗಳಿಸಬಹುದೆಂಬ ದಿಸೆಯಲ್ಲಿ ಮೊದಲ ಹೆಜ್ಜೆಯನ್ನು ಯುವಾಬ್ರಿಗೇಡ್ ನ ತರುಣರು ಇಟ್ಟಿದ್ದಾರೆ. ಇನ್ನುಳಿದದ್ದು ಸಂಬಂಧ ಪಟ್ಟ ಇಲಾಖೆಯವರಿಗೆ ಬಿಟ್ಟ ವಿಚಾರ. ಅದೇನೇ ಇರಲಿ ಮನಸ್ಸಿಗೆ ತುಂಬ ಕಿರಿ ಕಿರಿಯಾದಾಗ ಹೊರಗೆಲ್ಲೋ ತಿರುಗಾಡಿ ಬರಬೇಕೆಂಬ ಯೋಚನೆ ನಿಮ್ಮ ಮನಸ್ಸಿಗೆ ಬಂದರೆ ಕೊಸಳ್ಳಿ ಜಲಪಾತವನ್ನೊಮ್ಮೆ ನೋಡಿ ಬನ್ನಿ.

ತಾಲೂಕು ಸಂಚಾಲಕರಾದ ರೋಹಿತ್, ಕಿರಣ್,ಪ್ರಶಾಂತ್, ಯುವ ಬ್ರಿಗೇಡ್ ಕುಂದಾಪುರ ಕಾರ್ಯಕರ್ತರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)