ಬೈಂದೂರು : ಭಾರತೀಯ ಕಥೋಲಿಕ ಯುವ ಸಂಘಟನೆಯ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ

0
234
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು, ಜ.10 : ಬೈಂದೂರು ಹೋಲಿಕ್ರಾಸ್ ಚರ್ಚಿನ ಭಾರತೀಯ ಕಥೋಲಿಕ ಯುವ ಸಂಘಟನೆಯ 29ನೇ ವಾರ್ಷಿಕೋತ್ಸವು ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ನಡೆಯಿತು.

ಸುಮಧುರ ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ. ಪಾ. ರೊನಾಲ್ಡ್ ಮಿರಾಂದ ವಹಿಸಿದ್ದರು. ಈ ಸಂದರ್ಭದಲ್ಲಿ ನಾಟಕ ರಚನೆಗಾರ ಬರ್ನಾಡ್ ಡಿ. ಕೊಸ್ತಾ ಕುಂದಾಪುರ ಇವರಿಗೆ ಘಟಕದ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗಂಗೊಳ್ಳಿ ಚರ್ಚಿನ ಧರ್ಮಗುರು ರೆ.ಪಾ. ಅಲ್ಬರ್ಟ್ ಕ್ರಾಸ್ತಾ, ಚರ್ಚಿನ ಉಪಾಧ್ಯಕ್ಷ ಸ್ಟಾನಿ ಮಾಸ್ಟರ್, ಕಾರ್ಯದರ್ಶಿ ಅನಿತಾ ನಜ್ರೆತ್, ಸಂಘದ ಸಲಹೆಗಾರ್ ಜೊಸೆಪ್ ಫೆರ್ನಾಂಡಿಸ್, ಬೈಂದೂರು ಘಟಕದ ಅಧ್ಯಕ್ಷ ಸೂರಜ್ ನಜ್ರೆತ್, ಕಾರ್ಯದರ್ಶಿ ಬೆನಾಸಲ್ ನಜ್ರೆತ್, ವಲಯದ ಉಪಧ್ಯಾಕ್ಷ ವೆಲೆನ್ಸ ನಜ್ರೆತ್‍ರವರು ಉಪಸ್ಥಿತರಿದ್ದರು.

ನಂತರ ಶಾಲಾ ಮಕ್ಕಳಿಂದ ಮತ್ತು ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಅಂಜಲಿ ರೆಬೊರೊ ಸ್ವಾಗತಿಸಿದರು, ಅಶ್ವಿನಿ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು ಮತ್ತು ರುಸ್ಟಿನ್ ನಜ್ರೆತ್ ವಂದಸಿದರು.

   

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)