ನಾವು ಹಿಂದುಗಳು ಅದರಲ್ಲೂ ಮನುಷ್ಯತ್ವ ಇರುವವರು, ಗೋಡ್ಸೆ ಆರಾಧಕರು ನಮಗೆ ಹಿಂದುತ್ವದ ಪಾಠ ಮಾಡುವುದು ಬೇಡ – ಮುಖ್ಯಮಂತ್ರಿ ಸಿದ್ದರಾಮಯ್ಯ

0
242
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

      

ಬೈಂದೂರು. ಜ,08 : ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಯೋಜನೆಗಳ ಶಂಕು ಸ್ಥಾಪನೆ, 490 ಕೋಟಿ ಕಾಮಗಾರಿಗಳ ಉದ್ಘಾಟನೆ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಇಂದು ಬೆಳಿಗ್ಗೆ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿದರು.

381.91 ಕೋಟಿ ಮೌಲ್ಯದ ಯೋಜನೆಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿ 109.06 ಕೋಟಿ ಮೌಲ್ಯದ ಇತರ ಯೋಜನೆಗಳಿಗೆ ಅಡಿಪಾಯ ಹಾಕಿದರು. ಯೋಜನೆಗಳು ಪೊಡಬ್ಲ್ಯೂಡಿ, ಬಂದರು, ಒಳನಾಡು ಸಾಗಣಿಕೆ, ಶಿಕ್ಷಣ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ, ಮತ್ತು ಮಿನುಗಾರಿಕೆ ಇಲಾಖೆ ಒಳಗೊಂಡಿದೆ.

381.91 ಕೋಟಿ ಮೌಲ್ಯದ ಯೋಜನೆಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿ 109.06 ಕೋಟಿ ಮೌಲ್ಯದ ಇತರ ಯೋಜನೆಗಳಿಗೆ ಅಡಿಪಾಯ ಹಾಕಿದರು. ಯೋಜನೆಗಳು ಪೊಡಬ್ಲ್ಯೂಡಿ, ಬಂದರು, ಒಳನಾಡು ಸಾಗಣಿಕೆ, ಶಿಕ್ಷಣ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ, ಮತ್ತು ಮಿನುಗಾರಿಕೆ ಇಲಾಖೆ ಒಳಗೊಂಡಿದೆ.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರ ಶಾಸಕರು ಕೆ.ಗೋಪಾಲ ಪೂಜಾರಿ ವಹಿಸಿದರು.

ಕರಾವಳಿಯಲ್ಲಿ ಸದ್ಯಕ್ಕಿರುವ ಪರಿಸ್ಥಿತಿಗೆ ಕೋಮುವಾದಿಗಳು ಕಾರಣ ಎಂದು ಸಿ ಎಂ ಸಿದ್ದರಾಮಯ್ಯ ಉಡುಪಿಯಲ್ಲಿ ಅರೋಪಿಸಿದ್ದಾರೆ. ಇತ್ತೀಚೆಗೆ ನಡೆದ ಗಲಭೆಗಳಿಗೆ ಸಂಘ ಪರಿವಾರ ನೇರ ಕುಮ್ಮಕ್ಕು ನೀಡುತ್ತಿದ್ದಾರೆ. ಅವರು ಬಿಟ್ರೆ ಬೇರ್ಯಾರು ಇದನ್ನ ಮಾಡಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ರು.

ಪಿ ಎಫ್ ಐ, ಬಜರಂಗದಳ, ಶ್ರೀರಾಮಸೇನೆ ಮೇಲೆ ನಿಗಾ:  ಸಿಎಂ ರಾಜ್ಯದಲ್ಲಿ ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವ ಚರ್ಚೆ ನಡೆದಿಲ್ಲ. ಪಿ ಎಫ್ ಐ , ಬಜರಂಗದಳ, ಶ್ರೀರಾಮ ಸೇನೆ ನಿಗಾ ಇಡಲು ಸೂಚನೆ ನೀಡಿದ್ದೇನೆ ಎಂದರು.ಕಾಂಗ್ರೆಸ್ನವರನ್ನು ಹಿಂದೂ ವಿರೋಧಿಗಳು ಎಂದು ಹೇಳಿದವರಾರು? ಆ ರೀತಿ ಎನ್ನುವವರು‌ ಮನುಷ್ಯರೇ ಅಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ರಾಜ್ಯದ ಅಭಿವೃದ್ದಿ‌ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಠೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಗೋಡ್ಸೆಯ ಅನುಯಾಯುಗಳಿಂದ ನಾವು ಅಭಿವೃದ್ದಿಯ ಪಾಠ ಕಲಿಯಬೇಕಾಗಿಲ್ಲ. ಅಭಿವೃದ್ದಿಯಲ್ಲಿ‌ ಉತ್ತರ ಪ್ರದೇಶ ಎಷ್ಟನೆ ಸ್ಥಾನದಲ್ಲಿ‌ಇದೆ ಎಂಬುವುದು ಎಲ್ಲಾರಿಗೂ ಗೊತ್ತು, ಅಭಿವೃದ್ದಿಯಲ್ಲಿ‌ ನಾವೇ ನಂಬರ್ ವನ್ ಯುಪಿ ಒಂದು‌ ಜಂಗಲ್ ರಾಜ್, ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ ಎಂದು ತೀರುಗೇಟು ನೀಡಿದರು.

ಇನ್ನೂ ಶ್ರೀ‌ಕೃಷ್ಣ ಮಠಕ್ಕೆ ಭೇಟಿ‌ ನೀಡುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿ ಎಂ ನಾನು ದೇವಾಸ್ಥಾನಗಳಿಗೆ ಭೇಟಿ‌ ನೀಡ್ತೇನೆ. ಹಾಗಂತ ಎಲ್ಲಾ ದೇವಸ್ಥಾನಗಳಿಗೆ ಹೋಗಲ್ಲ , ಶ್ರೀ‌ಕೃಷ್ಣ ಮಠಕ್ಕೆ ಹೋಗದಿರುವುದು ದೊಡ್ಡ ವಿಷಯನೇ ಅಲ್ಲ ಎನ್ನುವುದರ ಮೂಲಕ ಮಠದ ಮೇಲಿನ ಮುನಿಸನ್ನು ಬಹಿರಂಗವಾಗಿ ತೋರಿಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಪರ್ನಾಂಡಿಸ್, ಬ್ಲೋಸಂ ಫೆರ್ನಾಂಡಿಸ್ , ಮಾನ್ಯ ಸಚಿವರು, ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮೋದ್ ಮಧ್ವರಾಜ್ ಪ್ರತಾಪ್‍ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಮುಖ್ಯಸ್ಥ ಜನಾರ್ಧನ್ ತೋನ್ಸೆ ಎಮ್.ಎನ್ ರಾಜೇಂದ್ರ ಕುಮಾರ್, ಯು.ಟಿ ಖಾದರ್, ಮಾಂಕಾಳ ವೈದ್ಯ ರಾಖೇಶ್ ಮಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಇತರರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)