ಜ.07ರಂದು ಬೈಂದೂರು ಕೆಪಿಜೆಪಿ ಪಕ್ಷದ ಕಾರ್ಯಕರ್ತರ ಪ್ರಥಮ ಸಭೆ – ಆಸಕ್ತರಿಗೆ ಆಹ್ವಾನ

0
1685

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (11) ಸಮ್ಮತ (1) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು ಜ.03 : ಚಲನಚಿತ್ರ ನಟ ಉಪೇಂದ್ರ ಅವರ ನೇತೃತ್ವದಲ್ಲಿ ಪ್ರಜಾಕೀಯ ಪಕ್ಷದ ನಿರ್ಮಿಸಿ ಜನರಿಗೆ ಹೊಸ ಕಲ್ಪನೆಯ ಸಮಾಜವನ್ನು ಕಟ್ಟುವುದಕ್ಕೆ ಹೊರಟಿದ್ದಾರೆ. ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಎನ್ನುವ ಅಂಶಗಳ ಮೂಲಕ ಉಪೇಂದ್ರ ಅವರು ತಮ್ಮ ಹೊಸ ಪಕ್ಷ ಶುರು ಮಾಡಿದ್ದಾರೆ. ನಮ್ಮೂರಿನ ಪ್ರಜ್ಞಾವಂತ ನಾಗರಿಕರು ಆದ ನಾವು ಸಹಾ ಇದನ್ನೇ ಪಾಲಿಸಬೇಕು ಎಂದು ಈಗ ಬೈಂದೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದ ಸ್ನೇಹಿತರು ಹಾಗೂ ಕಾರ್ಯಕರ್ತರು ತಮ್ಮ ಪ್ರಥಮ ಸಭೆಯನ್ನು ಜನವರಿ 7ರಂದು ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನಡೆಸಲಿದ್ದಾರೆ.

ಜನವರಿ 07ರಂದು ಭಾನುವಾರ ಬೆಳಿಗ್ಗೆ 10ಗಂಟೆ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ಕೆಪಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಸಮಾಲೋಚನಾ ನಡೆಯಲಿದ್ದು, ಬೈಂದೂರಿನ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಿ.ಜಿ.ಮೋಹನದಾಸ್ ಕರೆ ನೀಡಿದ್ದಾರೆ.

ರಾಜೇಶ್ ಬ್ರಹ್ಮಾವರ, ಸಂತೋಷ್ ಬೆಂಗಳೂರು – ಬೈಂದೂರು, ಹಾಗೂ ಇನ್ನಿತರ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಹಾಗೂ ಈ ಸಭೆಗೆ ಎಲ್ಲರಿಗೂ ಆಹ್ವಾನವನ್ನು ಪಕ್ಷದ ಕಾರ್ಯಕರ್ತರು ನೀಡಿದ್ದಾರೆ. ಇದು ಬೈಂದೂರು ಕೆಪಿಜೆಪಿ ಪಕ್ಷದ ಕಾರ್ಯಕರ್ತರ ಪತ್ರಿಕಾ ಪ್ರಕಟಣೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (11) ಸಮ್ಮತ (1) ಅಸಮ್ಮತ (1) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

B.G.Mohandas (ಬೀಜಿ)

B.G.Mohandas; M.Pharm FAGE DBM Founder ; GulfKannadiga.com & Kannadigaworld.com; kollur.com, devadiga.com & byndoor.com | Formerly Head of Pharmacy at Gulf Medical University, Dubai & Professor KMC Manipal