ಕುಂದಾಪುರದಲ್ಲಿ ವೈದ್ಯಕೀಯ ಬಂದ್ ಯಶಸ್ವಿ

0
995

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಕೇಂದ್ರ ಸರ್ಕಾರವು ತರಲುದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವನ್ನು ವಿರೋಧಿಸಿ ಕುಂದಾಪುರ ತಾಲೂಕಿನ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮಂಗಳವಾರ ಹೊರರೋಗಿ ವಿಭಾಗಗಳನ್ನು ಬೆಳಿಗ್ಗೆ 6ಗಂಟೆಯಿಂದ ಸಂಜೆ 6ರತನಕ ಮುಚ್ಚಿದ್ದವು.

ಐ.ಎಂ.ಎ.ಕುಂದಾಪುರದ ವೈದ್ಯ ಸದಸ್ಯರು ಮಿನಿ ವಿಧಾನಸೌಧದೆದುರು ಶಾಂತಿಯುತ ಸಭೆನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಐ.ಎಂ.ಎ.ನೇತಾರ ಡಾ.ಕೆ.ಎಸ್.ಕಾರಂತರು ಪ್ರತಿಭಟನೆಯ ಹಿನ್ನೆಲೆ ಮತ್ತು ಆವಶ್ಯಕತೆಯನ್ನು ವಿವರಿಸಿದರು. ತುರ್ತುಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಮಾನ್ಯ ಪ್ರಧಾನ ಮಂತ್ರಿಗಳಿಗೆ ಕಳುಹಿಸುವರೆ ಲಿಖಿತ ಮನವಿಯನ್ನು ಉಪ ಆಯುಕ್ತ ಶ್ರೀ ಅರುಣಪ್ರಭ ಅವರಿಗೆ ಅಧ್ಯಕ್ಷ ಡಾ.ಸತೀಶ ಪೂಜಾರಿಯವರು ಸರ್ವಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಕಾರ್ಯದರ್ಶಿ ಡಾ.ನಿತಿನ್ ಶೆಟ್ಟಿ ವಂದಿಸಿದರು.
(ಚಿತ್ರ ದಲ್ಲಿ:ಎಡದಿಂದ ಬಲಕ್ಕೆ: ಡಾ.ಎಚ್.ಎಸ್.ಮಲ್ಲಿ,ಕೆ.ಎಸ್.ಕಾರಂತ, ಸತೀಶ ಪೂಜಾರಿ ಮತ್ತಿತರರು..)

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)