ಅಸಾಧಾರಣ ಬಾಲ ಪ್ರತಿಭೆ – ಕುಂದಾಪುರದ ಶ್ರೇಷ್ಟ ಎ ಶಶಿಧರ್

0
1233

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಾರದ ವಿಶೇಷ ವರದಿ : ನಮ್ಮ ಸಣ್ಣ ನಗರಗಳ ಪುಟ್ಟ ಮಕ್ಕಳೂ  ಸಂಗೀತ-ನೃತ್ಯ ಕಲೆಯಲ್ಲಿ ದೊಡ್ಡ ಪಟ್ಟಣಗಳ ಮಕ್ಕಳಿಗಿಂತ ಪ್ರತಿಭೆಯಲ್ಲಿ ಹಿಂದಿಲ್ಲ ಎನ್ನುವುದನ್ನು ಅನೇಕ ಮಕ್ಕಳು ಸಾಬೀತು ಪಡಿಸಿವೆ. ತೊದಲು ನುಡಿಗಳಿಂದ ಕೌಟುಂಬಿಕರನ್ನಷ್ಟೇ ರಂಜಿಸುವ ವಯಸ್ಸಿನಲ್ಲಿ ಮಗುವೊಂದು ಕಿರು ಪರದೆಯ ನೃತ್ಯ ಸಂಗೀತಗಳನ್ನು ಕೌತುಕಮಯ ದೃಷ್ಟಿಯಿಂದ ವೀಕ್ಷಿಸಿ ಅನುಕರಿಸಿ ಭೇಷ್ ಎನ್ನಿಸಿಕೊಂಡರೆ ಆಕೆಯದು ನಿಜಕ್ಕೂ ಮೊಳಕೆಯ ಸಿರಿಯಲ್ಲವೇ? ಕುಂದಾಪುರದ ಕಾರ್ಪೋರೇಶನ್ ಬ್ಯಾಂಕಿನ ಉದ್ಯೋಗಿ ಶಶಿಧರ್ ಅವರ 5 1/2 ವರ್ಷದ ಪುತ್ರಿ (ಜನನ 09-02-2012) ಶ್ರೇಷ್ಟಾ ಇಂತಹ ವಯೋಗುಣಕ್ಕೂ ಮೀರಿದ ಪ್ರತಿಭಾ ಸಂಪನ್ನೆ.

  ಕುಂದಾಪುರದ ಸ್ಟೆಪ್ ಆನ್ ಸ್ಟೆಪ್ ಡ್ಯಾನ್ಸ್ ಅಕಾಡೆಮಿಯ ಜಯಂತ ಪೂಜಾರಿಯವರಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಪಾರಂಪರಿಕ ಕಲೆಗಳಾದ ಜಾನಪದ ನೃತ್ಯ, ಭರತ ನಾಟ್ಯ ದ ಜತೆ ಹೊಸ ಮಾದರಿಯ  ಹಿಪಾಪ್‌, ಸೆಮಿಕ್ಲಾಸಿಕಲ್ ನಲ್ಲೂ ಮತ್ತು  ಫಿಲ್ಮಿ ಡ್ಯಾನ್ಸ್ ನಲ್ಲೂ ಸೈ ಎನ್ನಿಸಿಕೊಂಡಿದ್ದಾಳೆ.

ಸುಮಧುರ ಕಂಠದ  ಈ ಸಂಗೀತ ಪ್ರವೀಣೆ ಯಕ್ಷಗಾನ ವೇಷ ಕಟ್ಟಿ ಕುಣಿದು ನೋಡುಗರನ್ನು  ಮೂಕವಿಸ್ಮಿತೆಯಾಗಿಸಿದ್ದಾಳೆ. ಬಾಲಕಿಯ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ತಾಯಿ ಅನುಪಮಳಿಂದಾಗಿ ಈ ಪುಟ್ಟ ಪ್ರತಿಭೆ ತನ್ನ 5 ನೇ ವರ್ಷದಲ್ಲಿ ಕುಂದಾಪುರ ತಾಲೂಕಿನಲ್ಲಿ ಸುಮಾರು 25ಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ್ದಾಳೆ. ತಾಲೂಕಿನ ಹೊರಗೆ ದೂರದ ಉತ್ತರ ಕನ್ನಡದ ಕಾರವಾರ, ಶಿರಸಿ ಮುಂತಾದ ಕಡೆ  ನೀಡಿದ ಶೋ ಸೇರಿ ಈಕೆ ಇದುವರೆಗೆ 50 ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಳೆ.

ಕುಂದಾಪುರದ ಹೋಲಿ ರೋಸರಿ ಕಿಂಡರ್ ಗಾರ್ಟನ್ ನಲ್ಲಿ UKG ವಿಧ್ಯಾರ್ಥಿನಿಯಾದ ಶ್ರೇಷ್ಟಾಳನ್ನು ಕುಂದಾಪುರದ ಲಯನ್ಸ್ ಕ್ಲಬ್, ಉಡುಪಿಯ ಜಿ ಶಂಕರ್ ಫೆಮಿಲಿ ಟ್ರಸ್ಟ್, ಸರ್ಕಲ್ ಫ್ರೆಂಡ್ ಭಟ್ಕಳ ಮುಂತಾದ ಸಂಘ ಸಂಸ್ಥೆಗಳು  ಸನ್ಮಾನಿಸಿ ತಮ್ಮ ಗರಿಮೆಯನ್ನು ಹೆಚ್ಚಿಸಿಕೊಂಡಿವೆ.  ಕಾರವಾರದ ಡಿಗ್ರಿ ಉತ್ಸವ , ಶಿರಸಿ ಉತ್ಸವಗಳಲ್ಲೂ ಶ್ರೇಷ್ಟಾಳ ಕಲಾ ಶ್ರೇಷ್ಟತೆಗೆ ಗೌರವ ಸಂದಿದೆ. ಅನೇಕ ಪಾರಿತೋಷಕಗಳು, ಪದಕಗಳು, ಬಹುಮಾನಗಳ ಖಜಾನೆಯೇ ಈಕೆಯ ಬಳಿ ಇದೆ.

ಕುಂದಾಪುರದಂತಹ ಚಿಕ್ಕ ನಗರದದಲ್ಲಿದ್ದೂ ಸಾಧನೆಗೈದ ಈಕೆ ನಿಜಕ್ಕೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರೇರಣಾದಾಯಿಯಾಗಿದ್ದಾಳೆ. ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಆಸಕ್ತಿಯನ್ನು ಗುರುತಿಸಿ ನೀರೆಯಬೇಕೆನ್ನುವ ವಿಶಿಷ್ಟ ಸಂದೇಶ ಈಕೆ ತನ್ನ ಸಾಧನೆಯ ಮೂಲಕ ನೀಡಿದ್ದಾಳೆ.

ವರದಿ : ಬೈಂದೂರು ಚಂದ್ರಶೇಖರ ನಾವಡ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)