ದ.ಕ. ಜಿಲ್ಲೆಯ ನಾಲ್ಕು ಪ್ರತಿಭೆಗಳಿಗೆ ರಾಷ್ಟ್ರ, ರಾಜ್ಯ ಪ್ರಶಸ್ತಿಯ ಗರಿ

0
14

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮ0ಗಳೂರು: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ದಕ್ಷಿಣ ಕನ್ನಡ ಜಿಲ್ಲೆಯ 4 ಮಂದಿ ಮಕ್ಕಳಿಗೆ ಈ ಸಾಲಿನಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ಇಂದು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಾಲ್ವರಿಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ರಾಷ್ಟ್ರ ಪ್ರಶಸ್ತಿಗೆ ಸ್ವಸ್ತಿಕ್ ಪದ್ಮ ಆಯ್ಕೆ : ಬಂಟ್ವಾಳ ತಾಲೂಕಿನ ಕೆದಿಲ ಮುಗರ್ಜೆಯ ಸ್ವಸ್ತಿಕ್ ಪದ್ಮ 2017ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಗಾಗಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇಂದು ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುವ ಮಕ್ಕಳ ದಿನಾಚರಣೆಯಂದು ರಾಷ್ಟ್ರಪತಿಗಳಿಂದ 10,000 ರೂ. ನಗದು ಹಾಗೂ ರಜತ ಪದಕದೊಂದಿಗೆ ಸನ್ಮಾನಿಸಲ್ಪಡುತ್ತಿದ್ದಾನೆ.

ಸ್ವಸ್ತಿಕ್ ಪದ್ಮ ಅನೇಕ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಪ್ರದರ್ಶಿಸಿರುತ್ತಾನೆ.

ರಾಜ್ಯ ಪ್ರಶಸ್ತಿಗೆ ಅದ್ವಿಕಾ ಶೆಟ್ಟಿ ಆಯ್ಕೆ : ಸುರತ್ಕಲ್ ಸುಭಾಷಿತ ನಗರದ ಎಂ.ಅದ್ವಿಕಾ ಶೆಟ್ಟಿ 2017 ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಿಂಚಿತ್ತಿರುವ ಅದ್ವಿಕಾ ಪ್ರತಿಭೆಯನ್ನು ಗುರುಸಿತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಂದು ಸನ್ಮಾನಿಸಲ್ಪಡುತ್ತಿದ್ದಾಳೆ.

ಅದ್ವಿಕಾ ಅನೇಕ ರಾಷ್ಟ್ರ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ.

ವೈಶಾಖ್‌, ನಿತಿನ್‌ಗೆ ಶೌರ್ಯ ಪ್ರಶಸ್ತಿ : ಸಜೀಪ ಮೂಡಾ ಕುಡೂರು ಮನೆಯ ವೈಶಾಖ್ ಹಾಗೂ ಪುತ್ತೂರಿನ ತಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್. ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ವೈಶಾಖ್ ಅಪಾಯಕಾರಿ ಹೆಬ್ಬಾವಿನ ಬಾಯಿಗೆ ಸಿಲುಕಿಕೊಂಡಿದ್ದು, ಬುದ್ಧಿ ಚಾತುರ್ಯದಿಂದ ಹಾವಿನ ಬಾಯಿಯಿಂದ ತನ್ನನ್ನು ಹಾಗೂ ತನ್ನ ತಂಗಿಯನ್ನು ರಕ್ಷಿಸಿದ್ದಾನೆ.

ಅದೇ ರೀತಿ ನಿತಿನ್ ವಿಷದ ಹಾವಿನಿಂದ ಕಡಿತಕ್ಕೊಳಗಾದ ತನ್ನ ತಂಗಿಯನ್ನು ತನ್ನ ಬುದ್ಧಿ ಚಾತುರ್ಯದಿಂದ ಶಾಲೆಯಲ್ಲಿ ಕಲಿತ ಪ್ರಥಮ ಚಿಕಿತ್ಸೆ ವಿಧಾನದ ಮೂಲಕ ಬಾಯಿಯಲ್ಲಿ ವಿಷವನ್ನು ಹೀರಿ ತನ್ನ ತಂಗಿಯ ಪ್ರಾಣವನ್ನು ರಕ್ಷಿಸಿದ್ದಾನೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia