ಪೊಲೀಸ್ ಠಾಣೆಯಾಯ್ತು ಮಸಾಜ್ ಸೆಂಟರ್! ಮಹಿಳಾ ಪೇದೆಯಿಂದ ಮೈ ಒತ್ತಿಸಿಕೊಂಡ ಎಎಸ್’ಐ

0
142
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ತೆಲಂಗಾಣ (ನ.14): ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯಲ್ಲಿಯೇ ಲೇಡಿ ಹೋಂ ಗಾರ್ಡ್​ನಿಂದ ಮಸಾಜ್ ಮಾಡಿಸಿಕೊಂಡು ವಿವಾದಲ್ಲಿ ಸಿಲುಕಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

ಸಮವಸ್ತ್ರ ತೆಗೆದು ಮಲಗಿಕೊಂಡಿರುವ ಪೊಲೀಸ್ ಅಧಿಕಾರಿಗೆ ಲೇಡಿ ಹೋಂ ಗಾರ್ಡ್ ಮಸಾಜ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಖಾಕಿ ಸಮವಸ್ತ್ರದಲ್ಲಿ ಮಸಾಜ್ ಮಾಡುತ್ತಿರುವ ಮಹಿಳೆಯನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಘಟನೆ ಗಮನಕ್ಕೆ ಬರುತ್ತಲೇ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಮುಖ್ಯಕಚೇರಿಯ ಸಶಸ್ತ್ರ ಮೀಸಲು ಪೊಲೀಸ್‍ನಲ್ಲಿ ಎಎಸ್‍ಐ ಆಗಿರೋ ಹಸನ್, ಕ್ಯಾಂಪಸ್ ಒಳಗಿನ ರೂಮಿನಲ್ಲೇ ಪೇದೆಯಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಈ ರೀತಿ ಸೇವೆ ಮಾಡಿಕೊಳ್ಳುತ್ತಿದ್ದರು. ವಾರದ ಹಿಂದೆ ಯಾರೋ ಒಬ್ಬರು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)