ಮಹಿಳೆಯನ್ನ ಮಂಚಕ್ಕೆ ಕರೆದ ಆರೋಪ- ಶಾಸಕ ಇಕ್ಬಾಲ್ ಅನ್ಸಾರಿ ಬಂಟನ ವಿರುದ್ಧ ದೂರು ದಾಖಲು

0
128
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಪ್ಪಳ: ಶಾಸಕ ಇಕ್ಬಾಲ್ ಅನ್ಸಾರಿಯ ಬಂಟ ಮತ್ತು ಗಂಗಾವತಿ ನಗರಸಭೆಯ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್‍ನಿಂದ ವಂಚನೆಗೆ ಒಳಗಾಗಿದ್ದ 4ನೇ ಪತ್ನಿ ಫರ್ವೀನ್ ಕೊಪ್ಪಳ ಎಸ್ಪಿಗೆ ದೂರು ನೀಡಿದ್ದಾರೆ. ಅಲ್ಲದೇ ಶ್ಯಾಮೀದ್ ತನ್ನನ್ನು ಮಂಚಕ್ಕೆ ಕರೆದಿದ್ದಾನೆ ಅಂತ ಮೊತ್ತೊಬ್ಬ ನೊಂದ ಮಹಿಳೆ ಫಾತಿಮಾ ದೂರು ನೀಡಿದ್ದಾರೆ.

ತಮಗೆ ನ್ಯಾಯ ಸಿಗದಿದ್ರೆ ಬೆಳಗಾವಿ ಅಧಿವೇಶನದ ಸ್ಥಳಕ್ಕೆ ಹೋಗಿ ಧರಣಿ ನಡೆದಸೋದಾಗಿ ಇಬ್ಬರು ಮಹಿಳೆಯರು ಎಚ್ಚರಿಸಿದ್ದಾರೆ. ಮಹಿಳಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ

ಶಾಸಕ ಅನ್ಸಾರಿ ಬಲಗೈ ಬಂಟ ಶ್ಯಾಮೀದ್ ಮನಿಯಾರ್ ಗೋವಾ ಮೂಲದ ಫರ್ವಿನ್ ಅಂದ ನೋಡಿ 2013ರಲ್ಲಿ 4ನೇ ಮದುವೆಯಾಗಿದ್ದನು. ಆ ಬಳಿಕ ನಿತ್ಯ ಕಿರುಕುಳ ಕೊಟ್ಟು ದೂರ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ರೆ 5ನೇ ಮದುವೆಯಾಗ್ತೀನಿ. ಲಕ್ಷ ಕೊಟ್ರೆ ಸಿನಿಮಾ ನಟಿಯರು ನನ್ನ ಜೊತೆ ಮಂಚಕ್ಕೆ ಬರ್ತಾರೆ. 5ನೇ ಕನ್ಯೆ ಮಾಡಿಕೊಟ್ರೆ ಅವ್ರಿಗೆ ಕಮಿಷನ್ ಕೊಡ್ತೀನಿ ಅಂತ ಹೇಳಿಕೊಂಡಿದ್ದ ಎನ್ನಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)